ಫೋನ್ ಪೇ, ಗೂಗಲ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್: ಇನ್ನು ಕೇವಲ 15 ಸೆಕೆಂಡ್ ಗಳಲ್ಲಿ ಹಣ ಪಾವತಿ

ನವದೆಹಲಿ: ಇನ್ನು ಮುಂದೆ ಗೂಗಲ್ ಪೇ, ಫೋನ್ ಪೇ ಸೇರಿದಂತೆ ಆನ್ಲೈನ್ ಪಾವತಿ ಆ್ಯಪ್ ಗಳ ಮೂಲಕ ಮಾಡುವ ಯುಪಿಐ ಪೇಮೆಂಟ್ ಮತ್ತಷ್ಟು ವೇಗವಾಗಲಿದೆ.

ಇದರಿಂದ ಬಳಕೆದಾರರ ಕಾರ್ಯಕ್ಕೆ ಹೆಚ್ಚಿನ ವೇಗ ಸಿಗುತ್ತದೆ. ಮತ್ತು ಸುಲಭವಾಗಿ, ಸರಾಗವಾಗಿ ಹಣ ಪಾವತಿಸಬಹುದಾಗಿದೆ. ಆನ್ಲೈನ್ ಆ್ಯಪ್ ಗಳ ಮೂಲಕ ಹಣ ರವಾನೆ ಸಮಯವನ್ನು ವೇಗಗೊಳಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCA) ಆದೇಶ ಹೊರಡಿಸಿದೆ.

ಗೂಗಲ್ ಪೇ, ಫೋನ್ ಪೇ ಸೇರಿದಂತೆ ಅನೇಕ ಆನ್ಲೈನ್ ಪಾವತಿ ಆ್ಯಪ್ ಗಳ ಮೂಲಕ ಮಾಡುವ ಯುಪಿಐ ಪೇಮೆಂಟ್ ಇನ್ನು ಮುಂದೆ 30 ಸೆಕೆಂಡ್ ಗಳ ಬದಲಾಗಿ 15 ಸೆಕೆಂಡ್ ಗಳಲ್ಲಿ ಪಾವತಿಯಾಗಲಿದೆ. NPCA ಆದೇಶದಂತೆ ಜೂನ್ 16 ರಿಂದಲೇ ಹೊಸ ನಿಯಮಗಳು ಜಾರಿಗೆ ಬರಲಿದ್ದು, 15 ಸೆಕೆಂಡ್ ಗಳಲ್ಲಿ ಹಣ ಪಾವತಿಸಬಹುದಾಗಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read