ಪ್ರಯಾಣಿಕರು, ನಿರ್ವಾಹಕರ ನಡುವೆ ಚಿಲ್ಲರೆ ಸಮಸ್ಯೆಗೆ ಪರಿಹಾರ : `KSRTC’ಯಲ್ಲೂ `UPI’ ಪಾವತಿ ವ್ಯವಸ್ಥೆ ಜಾರಿ

ಬೆಂಗಳೂರು : ಇಂದಿನ ಡಿಜಿಟಲ್ ಯುಗದಲ್ಲಿ ಪ್ರತಿಯೊಂದು ವ್ಯವಹಾರಕ್ಕೆ ಯಪಿಐ ಬಳಕೆ ಮಾಡಲಾಗುತ್ತಿದೆ. ಇದೀಗ ಮುಂದುವರೆದು ಕೆಎಸ್ ಆರ್ ಟಿಸಿಯಲ್ಲೂ ಯುಪಿಐ ಪಾವತಿ ವ್ಯವಸ್ಥೆಯನ್ನು ಜಾರಿಗೆ ತರಲು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮುಂದಾಗಿದೆ.

ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಶಕ್ತಿ ಯೋಜನೆ ಅನುಷ್ಠಾನದ ನಂತರ ನಿರ್ವಾಹಕರ  ಕೈಯಲ್ಲಿ ಹಾರ್ಡ್ ಕ್ಯಾಶ್ ಕೂಡ ಕಡಿಮೆಯಾಗಿದೆ. ಚಿಲ್ಲರೆ ಸಮಸ್ಯೆ ಎದುರಾಗಿ ಬಸ್ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಗಲಾಟೆ ಹೆಚ್ಚುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಯುಪಿಐ ಆಧಾರಿತ ಅವಕಾಶ ಕಲ್ಪಿಸಲು ಕೆಎಸ್ ಆರ್ ಟಿಸಿ ಅಧ್ಯಯನ ಕೈಗೊಂಡಿದೆ.

ಚಿಲ್ಲರೆ ಸಮಸ್ಯೆಗೆ ಪರಿಹಾರಕ್ಕೆ ಕೆಎಸ್ ಆರ್ ಟಿಸಿ ಸಂಶೋಧನೆ ನಡೆಸಿ ಪ್ರಾಯೋಗಿಕವಾಗಿ ಆಗಸ್ಟ್ ಕೊನೆಯ ವಾರದಿಂದ ಯುಪಿಐ ಆಧಾರಿತ ಪಾವತಿಗೆ ಚಾಲನೆ ನೀಡಿದೆ. ಹಲವು ಪ್ರಯಾಣಿಕರು ಕ್ಯು ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ  ಟಿಕೆಟ್ ಹಣ ಪಾವತಿಸುತ್ತಿದ್ದಾರೆ. ಶೀಘ್ರವೇ ರಾಜ್ಯಾದ್ಯಂತ ಯುಪಿಐ ಪಾವತಿ ವ್ಯವಸ್ಥೆ ಜಾರಿಗೆ ಬರಲಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read