ರಾಯಚೂರು: ನಟ ಉಪೇಂದ್ರ ಕುಟುಂಬ ಸಮೇತರಾಗಿ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ ಮಠಕ್ಕೆ ತೆರಳಿ ಗುರು ರಾಯರ ದರ್ಶನ ಪಡೆದಿದ್ದಾರೆ.
ನಟ ಉಪೇಂದ್ರ, ಪತ್ನಿ ಪ್ರಿಯಾಂಕಾ ಹಾಗೂ ಮಕ್ಕಳ ಸಮೇತರಾಗಿ ರಾಯರ ಮಠಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ರಜತ ಗಜವಾಹನೋತ್ಸವದಲ್ಲಿ ಭಾಗಿಯಾದರು. ಇದೇ ವೇಳೆ ರಥವನ್ನು ಎಳೆದು ಉಪೇಂದ್ರ ಕುಟುಂಬ ಹರಕೆ ತೀರಿಸಿದೆ.
ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮೀಜಿಗಳ ಆಶಿರ್ವಾದ ಪಡೆದರು. ಈ ವೇಳೆ ಫಲಮಂತ್ರಾಕ್ಷತೆ, ಶೇಷವಸ್ತ್ರ ನೀಡಿ ಸ್ವಾಮೀಜಿ ಆಶಿರ್ವದಿಸಿದರು.