ಭಾರತದ ಮಾರುಕಟ್ಟೆ ಪ್ರವೇಶಿಸಿದ ಬಜಾಬ್​ ಪಲ್ಸರ್ 220F; ಇಲ್ಲಿದೆ ಬೆಲೆ ಸೇರಿದಂತೆ ಇತರೆ ವೈಶಿಷ್ಟ್ಯ

ಬಜಾಜ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಬಜಾಬ್​ ಪಲ್ಸರ್ 220F ಪರಿಚಯಿಸಿದೆ. ಇದರ ಎಕ್ಸ್​ ಷೋರೂಂ ಬೆಲೆ 1,39,686 ರೂಪಾಯಿಗಳು. ಇದು ಮೂಲ ಬಜಾಜ್ ಪಲ್ಸರ್​ನ ಗುಣಗಳನ್ನೇ ಹೊಂದಿದೆ.

ಯಾಂತ್ರಿಕವಾಗಿ ಯಾವುದೇ ಬದಲಾವಣೆಯಿಲ್ಲ. ಆದರೆ ಎಂಜಿನ್​ನಲ್ಲಿ ಸ್ವಲ್ಪ ಬದಲಾವಣೆ ಮಾಡಲಾಗಿದ್ದು ಇದು BSVI ಹಂತ 2 ಮಾಲಿನ್ಯ ನಿಯಮಗಳಿಗೆ ಅನುಗುಣವಾಗಿ ಮಾರ್ಪಡಿಸಲಾಗಿದೆ.

ಇದರ ಜೊತೆಗೆ ಡ್ಯುಯಲ್ ಎಲ್‌ಇಡಿ ಟೈಲ್ ಲೈಟ್‌ಗಳು, ಸ್ಪ್ಲಿಟ್ ಗ್ರಾಬ್ ರೈಲ್, ಕಪ್ಪು ಮಿಶ್ರಲೋಹದ ಚಕ್ರಗಳು, ಹ್ಯಾಲೊಜೆನ್ ಟರ್ನ್ ಇಂಡಿಕೇಟರ್‌ಗಳು ಮತ್ತು ಪೈಲಟ್ ಲೈಟಿಂಗ್, ಪ್ರೊಜೆಕ್ಟರ್ ಹೆಡ್‌ಲೈಟ್, ಟಾಲ್ ಕ್ಲಿಪ್-ಆನ್ ಹ್ಯಾಂಡಲ್‌ಬಾರ್ ಇವುಗಳಲ್ಲಿ ಸ್ವಲ್ಪ ಅಪ್​ಡೇಟ್​ ಮಾಡಲಾಗಿದೆ. ಇದರ ಹೊರತಾಗಿಯೂ ಮೂಲ ಬೈಕ್​ನ ಉತ್ತಮ ವೈಶಿಷ್ಟ್ಯಗಳನ್ನೇ ಇವು ಹೊಂದಿವೆ.

ಬಜಾಜ್ ಪಲ್ಸರ್ 220F ಇದರ ಬ್ರೇಕಿಂಗ್ ಸಿಸ್ಟಮ್​ನಲ್ಲಿ ತುಸು ಬದಲಾವಣೆ ಆಗಿದೆ. ಮುಂಭಾಗದಲ್ಲಿ 280 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಮೂಲಕ ಇದು ಕಾರ್ಯ ನಿರ್ವಹಿಸುತ್ತದೆ, ಇವೆರಡೂ ಏಕ-ಚಾನೆಲ್ ಎಬಿಎಸ್ ಸಿಸ್ಟಮ್‌ನಿಂದ ಸಹಾಯದಿಂದ ರೂಪಿಸಲಾಗಿದೆ.

ಮೋಟಾರ್‌ಬೈಕ್ 90/90 ವಿಭಾಗದೊಂದಿಗೆ 17-ಇಂಚಿನ ಮುಂಭಾಗದ ಚಕ್ರ ಮತ್ತು 120/80 ವಿಭಾಗದೊಂದಿಗೆ ಹಿಂದಿನ ಚಕ್ರವನ್ನು ಹೊಂದಿದೆ. ಮೊದಲಿನಂತೆಯೇ 220F ಕೂಡ 1,350 ಮಿಲಿಮೀಟರ್‌ಗಳ ವ್ಹೀಲ್‌ಬೇಸ್, 165 ಮಿಲಿಮೀಟರ್‌ಗಳ ಗ್ರೌಂಡ್ ಕ್ಲಿಯರೆನ್ಸ್ ಮತ್ತು 795 ಮಿಲಿಮೀಟರ್‌ಗಳ ಸೀಟ್ ಎತ್ತರವನ್ನು ಹೊಂದಿರುವುದಾಗಿ ಕಂಪೆನಿ ಹೇಳಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read