BIG NEWS: ವಿಪಕ್ಷಗಳ ಮೈತ್ರಿಕೂಟಕ್ಕೆ ‘INDIA’ ಹೆಸರು ಕಾನೂನು ಉಲ್ಲಂಘನೆ: ಸುರೇಶ್ ಕುಮಾರ್

ಬೆಂಗಳೂರು: ಬೆಂಗಳೂರಿನಲ್ಲಿ ಎರಡು ದಿನಗಳ ಕಾಲ ನಡೆದ ವಿಪಕ್ಷಗಳ ನಾಯಕರ ಸಭೆಯಲ್ಲಿ ಯುಪಿಎ ಮೈತ್ರಿಕೂಟಕ್ಕೆ INDIA ಎಂದು ಹೆಸರಿಡಲಾಗಿದೆ.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟ ಸೋಲಿಸಲು ವಿಪಕ್ಷಗಳು ರಣತಂತ್ರ ರೂಪಿಸಿದ್ದು, ಐ.ಎನ್.ಡಿ.ಐ.ಎ. –ಇಂಡಿಯಾ ಕೂಟ ರಚನೆಗೆ ನಿರ್ಧರಿಸಿವೆ. ಈ ಮೊದಲು ಯುಪಿಎ ಎಂದಿದ್ದ ಮೈತ್ರಿಕೂಟಕ್ಕೆ ಈಗ INDIA ಎಂದು ಹೆಸರಿಡಲಾಗಿದೆ. ಇದಕ್ಕೆ ಬಿಜೆಪಿ ನಾಯಕ, ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಯುಪಿಎ ಈಗ I N D I A ಆಗಿದೆ. ನಮ್ಮ ದೇಶದಲ್ಲಿ The Emblems & Names (Prevention of Improper Use) 1950 ಎಂಬ ಕಾಯಿದೆ ಇದೆ. ಈ ರೀತಿ I N D I A ಎಂದು ಕರೆದುಕೊಳ್ಳುವುದು ಈ ಕಾಯ್ದೆಯ  ಸೆಕ್ಷನ್ 2(c) ಮತ್ತು ಶೆಡ್ಯೂಲ್ 1(4) & (7) ಗಳ ಸ್ಪಷ್ಟ ಉಲ್ಲಂಘನೆ ಯಾಗಿದೆ ಎಂದು ಮಾಜಿ ಸಚಿವ ಸುರೇಶ್‌ ಕುಮಾರ್‌ ಫೇಸ್ಬುಕ್‌ ಪೋಸ್ಟ್‌ ಹಾಕಿದ್ದಾರೆ.

https://www.facebook.com/nimmasuresh/posts/7045806435446641?ref=embed_post

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read