ಮಗಳ ಹತ್ಯೆಗೆ ತಾಯಿಯಿಂದಲೇ ಸುಫಾರಿ; ಅರಿಯದೆ ಮಾಡಿದ ತಪ್ಪಿಗೆ ತಾನೇ ಬಲಿ…!

ತನ್ನ ಮಗಳು ಯುವಕನೊಬ್ಬನ ಜೊತೆ ಓಡಿ ಹೋಗಿದ್ದಳೆಂಬ ಕಾರಣಕ್ಕೆ ಆಕ್ರೋಶಗೊಂಡಿದ್ದ ಮಹಿಳೆ, ಆಕೆಯನ್ನು ಕೊಲೆ ಮಾಡಲು ಸುಫಾರಿ ನೀಡಿದ್ದು, ಆದರೆ ಸುಫಾರಿ ಪಡೆದಾತನೇ ತನ್ನ ಮಗಳ ಪ್ರಿಯಕರನೆಂಬುದು ತಿಳಿಯದೆ ಆತನಿಂದಲೇ ಈಗ ಕೊಲೆಯಾಗಿದ್ದಾಳೆ. ಇಂತದೊಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

35 ವರ್ಷದ ಅಲ್ಕಾ ಎಂಬ ಮಹಿಳೆ, 17 ವರ್ಷದ ತನ್ನ ಮಗಳ ವರ್ತನೆಯಿಂದ ಬೇಸತ್ತು ಆಕೆಯನ್ನು ಕೊಲ್ಲಲು ವ್ಯಕ್ತಿಯೊಬ್ಬನನ್ನು ನೇಮಿಸಿದ್ದಳು. ಅಲ್ಕಾ 38 ವರ್ಷದ ಸುಭಾಷ್ ಸಿಂಗ್ ಜೊತೆ ಸಂಪರ್ಕದಲ್ಲಿದ್ದು, ಮಗಳನ್ನು ಕೊಲೆ ಮಾಡಲು ಹಣ ನೀಡಿದ್ದಾಳೆ. ಆದರೆ ಅಲ್ಕಾಗೆ ಗೊತ್ತಿರದ ವಿಷಯವೆಂದರೆ ತಾನು ಸುಫಾರಿ ನೀಡಿದ್ದ ಸುಭಾಷ್ ತನ್ನ ಮಗಳ ಪ್ರೇಮಿ ಎಂಬ ಸಂಗತಿ.

ʼಟೈಮ್ಸ್ ಆಫ್ ಇಂಡಿಯಾʼ ದ ವರದಿಯ ಪ್ರಕಾರ ಸುಫಾರಿ ಪಡೆದಿದ್ದ ಸುಭಾಷ್‌, ಮಗಳನ್ನು ಕೊಲ್ಲುವ ಬದಲು ಅಲ್ಕಾಳನ್ನು ಕೊಂದಿದ್ದಾನೆ. ಅಲ್ಕಾರ ಮಗಳು ಈ ಹಿಂದೆ ತಮ್ಮ ಪ್ರದೇಶದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಳು. ಆದರೆ ತನ್ನ ಮಗಳು ಯಾರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂಬುದು ಅವಳಿಗೆ ತಿಳಿದಿರಲಿಲ್ಲ. ಫರೂಕಾಬಾದ್‌ನಲ್ಲಿರುವ ತನ್ನ ತಾಯಿ ಮನೆಗೆ ಕಳುಹಿಸಿದ ನಂತರ, ಮಗಳು ಫೋನ್‌ ಮೂಲಕ ತನ್ನ ಪ್ರಿಯಕರನ ಜೊತೆ ಸಂಪರ್ಕದಲ್ಲಿರುವುದು ತಿಳಿದುಬಂದಿದೆ. ಆದರೆ ಆತ ಯಾರೆಂಬ ಸಂಗತಿ ಗೊತ್ತಾಗಿರಲಿಲ್ಲ. ಮಗಳ ವರ್ತನೆಯಿಂದ ಬೇಸತ್ತು ಆಕೆಯನ್ನು ಮುಗಿಸಿಬಿಡಲು ಅಲ್ಕಾ ನಿರ್ಧರಿಸಿದ್ದಾಳೆ.

ಬಳಿಕ ಅಲ್ಕಾ ತನ್ನ ಮಗಳನ್ನು ಕೊಲ್ಲಲು ಸೆಪ್ಟೆಂಬರ್ 27 ರಂದು ಸುಭಾಷ್‌ಗೆ 50,000 ರೂ. ನೀಡಿದ್ದಳು. ಆದರೆ ಸುಭಾಷ್ ಈ ವಿಷಯವನ್ನು ತನ್ನ ಪ್ರೇಯಸಿಯಾದ ಅಲ್ಕಾ ಮಗಳಿಗೆ ತಿಳಿಸಿದ್ದಾನೆ. ಇಬ್ಬರೂ ಸೇರಿ ಪ್ಲಾನ್‌ ಮಾಡಿದ್ದು, ತನ್ನ ತಾಯಿಯನ್ನು ಕೊಂದರೆ ನಿನ್ನನ್ನು ಮದುವೆಯಾಗುವುದಾಗಿ ಆಕೆ ಭರವಸೆ ನೀಡಿದ್ದಾಳೆ. ಅದರಂತೆ ಆತ ಅಲ್ಕಾಳ ಕೊಲೆ ಮಾಡಿದ್ದು, ಪೊಲೀಸರ ವಿಚಾರಣೆ ವೇಳೆ ಈ ಜೋಡಿ ತಮ್ಮ ಅಪರಾಧವನ್ನು ಒಪ್ಪಿಕೊಂಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read