ನಾಪತ್ತೆಯಾಗಿದ್ದ ವಿವಾಹಿತ ಮಹಿಳೆ 3 ವರ್ಷಗಳ ಬಳಿಕ ಸಿಕ್ಕಿಬಿದ್ದಿದ್ದು ಯಾರ ಜೊತೆಗೆ ಅಂತ ತಿಳಿದ್ರೆ ಶಾಕ್ ಆಗ್ತೀರಾ….!

ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆ ಕೊಲೆಯಾಗಿದ್ದಾಳೆಂದು ಭಾವಿಸಲಾಗಿದ್ದು, ಆಕೆಯ ಪತಿ ಮತ್ತಾತನ ಮನೆಯವರು ಪೊಲೀಸ್ ವಿಚಾರಣೆ ಹೆಸರಿನಲ್ಲಿ ಸಂಕಷ್ಟ ಎದುರಿಸಿದ್ದರು. ಇದೀಗ ಆಕೆ ಜೀವಂತವಾಗಿ ಪತ್ತೆಯಾಗಿದ್ದು, ಜೊತೆಗಿದ್ದ ವ್ಯಕ್ತಿಯನ್ನು ಕಂಡು ಮಹಿಳೆಯ ಕುಟುಂಬಸ್ಥರು ಮಾತ್ರವಲ್ಲದೆ ಪತಿ ಮನೆಯವರು ಶಾಕ್ ಆಗಿದ್ದಾರೆ.

ಇಂಥದೊಂದು ಘಟನೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆದಿದ್ದು, ನವೆಂಬರ್ 17, 2017 ರಂದು ವಿನಯ್ ಕುಮಾರ್ ಎಂಬಾತನ ಜೊತೆಗೆ ಕವಿತಾ ಎಂಬಾಕೆಯ ವಿವಾಹ ನೆರವೇರಿತ್ತು. ಮೇ 5, 2021 ರಂದು ಗೊಂಡದಲ್ಲಿರುವ ತನ್ನ ಪತಿಯ ಮನೆಯಿಂದ ಕವಿತಾ ನಾಪತ್ತೆಯಾಗಿದ್ದಳು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕವಿತಾ ಕುಟುಂಬಸ್ಥರು, ವಿನಯ್ ಮತ್ತವನ ಕುಟುಂಬ ಸದಸ್ಯರು ಕವಿತಾಳನ್ನು ಕೊಲೆ ಮಾಡಿರುವುದಾಗಿ ಆರೋಪಿಸಿದ್ದರು. ಹೀಗಾಗಿ ಪೊಲೀಸರು ವಿನಯ್ ಮತ್ತವನ ಕುಟುಂಬ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದರು.

ಆದರೆ ವರ್ಷಗಳು ಕಳೆದರೂ ಸಹ ಕವಿತಾ ಕುರಿತು ಯಾವುದೇ ಸುಳಿವು ಲಭ್ಯವಾಗಿರಲಿಲ್ಲ. ಇದರ ಮಧ್ಯೆ ಕವಿತಾ ಪತಿ ವಿನಯ್ ನ್ಯಾಯಾಲಯದ ಮೆಟ್ಟಿಲೇರಿದ್ದು, ಕೋರ್ಟ್ ಸೂಚನೆಯಂತೆ ಪೊಲೀಸರು ವಿಶೇಷ ತನಿಖಾ ತಂಡ ರಚಿಸಿದ್ದರು. ಇದೀಗ ಕವಿತಾ ಲಕ್ನೋದಲ್ಲಿ ಪತ್ತೆಯಾಗಿದ್ದು ಆಕೆಯ ಜೊತೆ ಗೊಂಡಾದಲ್ಲಿ ಮನೆ ಸಮೀಪದಲ್ಲಿಯೇ ಇದ್ದ ಸತ್ಯನಾರಾಯಣ ಎಂಬಾತನ ಜೊತೆ ವಾಸಿಸುತ್ತಿರುವುದು ತಿಳಿದು ಬಂದಿದೆ. ಸತ್ಯನಾರಾಯಣ ಅಂಗಡಿಯೊಂದನ್ನು ನಡೆಸುತ್ತಿದ್ದು, ಆತನ ಜೊತೆ ಕವಿತಾಗೆ ಪ್ರೇಮಾಂಕುರವಾಗಿದೆ. ಹೀಗಾಗಿ ಇಬ್ಬರೂ ಓಡಿ ಹೋಗಿ ಒಟ್ಟಿಗೆ ವಾಸಿಸುತ್ತಿದ್ದರು. ಪೊಲೀಸರು ಈಗ ಕವಿತಾಳನ್ನು ಕರೆದುಕೊಂಡು ಬಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read