
ಲಖ್ನೋ: ಸರ್ಕಾರಿ ನೌಕರನೊಬ್ಬ ಕರ್ತವ್ಯದ ವೇಳೆ ಕಚೇರಿಯಲ್ಲಿ ಮದ್ಯ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಅವರನ್ನು ಸ್ಥಳೀಯ ಸುದ್ದಿ ಮಾಧ್ಯಮವು ಕಪೂರ್ ಸಿಂಗ್ ಎಂದು ಗುರುತಿಸಿದೆ. ಆತ ಉತ್ತರ ಪ್ರದೇಶದ ಸ್ವೈಜ್‌ಪುರದ ನೋಂದಾವಣೆ ಇಲಾಖೆಯಲ್ಲಿ ನಿಯೋಜನೆಗೊಂಡ ನೌಕರನಾಗಿದ್ದಾನೆ.
ಈತ ಕುಡಿತದ ಚಟ ಹೊಂದಿದ್ದ ಎಂದು ಹೇಳಲಾಗಿದೆ. ಆದರೆ ಕರ್ತವ್ಯದ ವೇಳೆಯಲ್ಲೇ ಅದೂ ಕಚೇರಿಯಲ್ಲಿಯೇ ಮದ್ಯ ಸೇವನೆ ಮಾಡಿದ್ದಾನೆ. ಈತನ ಅನುಚಿತ ವರ್ತನೆ ವಿಡಿಯೋ ವೈರಲ್ ಆಗಿದ್ದು, ಕ್ರಮಕ್ಕೆ ಒತ್ತಾಯಿಸಲಾಗಿದೆ.
https://twitter.com/anujPal50037043/status/1695660119026262456

 
		 
		 
		 
		 Loading ...
 Loading ... 
		 
		 
		