ಉತ್ತರಪ್ರದೇಶದ ಹರ್ದೋಯ್‌ನಲ್ಲಿ ಬಿಜೆಪಿ ಪ್ರತಿಭಟನೆ ವೇಳೆ ಮಾಜಿ ಮುಖ್ಯಮಂತ್ರಿ ಮತ್ತು ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪ್ರತಿಕೃತಿಯನ್ನು ದಹಿಸುವಾಗ ಪಕ್ಷದ ಕೆಲವು ಕಾರ್ಯಕರ್ತರಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ.
ಬಿಜೆಪಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದು ಪ್ರತಿಭಟನಾಕಾರರು ಅಖಿಲೇಶ್ ಯಾದವ್ ಪ್ರತಿಕೃತಿಗೆ ಬೆಂಕಿ ಹೊತ್ತಿಸಿದ ನಂತರ ಈ ಘಟನೆ ಸಂಭವಿಸಿತು.
ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಧಾರ್ಮಿಕ ಮುಖಂಡರು ಮತ್ತು ಮಾಫಿಯಾಗಳ ಬಗ್ಗೆ ಇತ್ತೀಚೆಗೆ ನೀಡಿದ ಹೇಳಿಕೆಗಳನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ವೇಳೆ ಬಿಜೆಪಿ ಕಾರ್ಯಕರ್ತರು ಅಖಿಲೇಶ್ ಯಾದವ್ ಅವರ ಪ್ರತಿಕೃತಿಯನ್ನು ದಹಿಸಿದರು. ಈ ವೇಳೆ ಬೆಂಕಿ ಕೆಲ ಪ್ರತಿಭಟನಾಕಾರರಿಗೆ ತಕ್ಷಣವೇ ಹೊತ್ತಿಕೊಂಡಿತು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಬಿಜೆಪಿ ಕಾರ್ಯಕರ್ತರು ಅಖಿಲೇಶ್ ಯಾದವ್ ಅವರ ಪ್ರತಿಕೃತಿಯನ್ನು ದಹಿಸಲು ಹರ್ದೋಯಿಯಲ್ಲಿರುವ ಸಿನಿಮಾ ಚೌರಾದಲ್ಲಿ ಜಮಾಯಿಸಿದರು. ಆದರೆ ಸ್ಥಳದಲ್ಲಿದ್ದ ಪೊಲೀಸರು ಕೂಡಲೇ ಬೆಂಕಿ ನಂದಿಸಿದ್ದಾರೆ.
ಧಾರ್ಮಿಕ ಮುಖ್ಯಸ್ಥರು ಮತ್ತು ಮಾಫಿಯಾಗಳ ನಡುವೆ ಯಾವುದೇ ವ್ಯತ್ಯಾಸವಿಲ್ಲ ಎಂದು ಅಖಿಲೇಶ್ ಯಾದವ್ ಹೇಳಿಕೆ ನೀಡಿರುವುದು ಪ್ರತಿಭಟನೆಗೆ ಕಾರಣವಾಗಿತ್ತು. ಈ ಹೇಳಿಕೆಯು ರಾಜಕೀಯ ಉದ್ವಿಗ್ನತೆಯನ್ನು ಹುಟ್ಟುಹಾಕಿತು, ಪಕ್ಷದ ನಾಯಕತ್ವದ ನಿರ್ದೇಶನದ ನಂತರ ಹರ್ದೋಯಿಯಲ್ಲಿ ಬಿಜೆಪಿ ಯುವ ಘಟಕದ ಕಾರ್ಯಕರ್ತರು ಪ್ರತಿಭಟನೆಯ ರೂಪವಾಗಿ ಸಿನಿಮಾ ಚೌರಾದಲ್ಲಿ ಯಾದವ್ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು.
https://twitter.com/janabkhan08/status/1835157621906522464?ref_src=twsrc%5Etfw%7Ctwcamp%5Etweetembed%7Ctwterm%5E1835157621906522464%7Ctwgr%5E4a868c353e2353142ff4cb0