ಸ್ಮಾರ್ಟ್ ಫೋನ್ ಖರೀದಿಸಿದವರಿಗೆ ಬಿಯರ್ ಕ್ಯಾನ್ ಉಚಿತ; ಆಫರ್ ಗಾಗಿ ಮುಗಿಬಿದ್ದ ಯುವಜನತೆ….!

ಉತ್ತರ ಪ್ರದೇಶದ ಬದೋಹಿಯಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ಮೊಬೈಲ್ ಅಂಗಡಿ ಒಂದರ ಮಾಲೀಕ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ನೀಡುವುದಾಗಿ ಘೋಷಣೆ ಮಾಡಿದ್ದು, ಈ ಆಫರ್ ಪಡೆಯಲು ಯುವಜನ ಮುಗಿಬಿದ್ದಿದ್ದಾರೆ.

ಬದೋಹಿಯ ಚೌರಿ ರಸ್ತೆಯಲ್ಲಿ ಮೊಬೈಲ್ ಅಂಗಡಿ ಹೊಂದಿರುವ ರಾಜೇಶ್ ಮೌರ್ಯ ಎಂಬಾತ ಈ ಆಫರ್ ಘೋಷಿಸಿದ್ದು, ಮಾರ್ಚ್ 3 ರಿಂದ 7 ರವರೆಗೆ ಇದು ಲಭ್ಯವಿರಲಿದೆ ಎಂದು ತಿಳಿಸಲಾಗಿತ್ತು. ಅಲ್ಲದೆ ನಗರದ ವಿವಿಧೆಡೆ ಪೋಸ್ಟರ್, ಪಾಂಪ್ಲೆಟ್ ಹಾಗೂ ಅನೌನ್ಸ್ಮೆಂಟ್ ಮೂಲಕ ಪ್ರಚಾರ ಮಾಡಲಾಗಿತ್ತು.

ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಕೊಂಡವರಿಗೆ ಎರಡು ಬಿಯರ್ ಕ್ಯಾನ್ ಉಚಿತವಾಗಿ ಸಿಗಲಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಅಂಗಡಿ ಮುಂದೆ ಜನದಟ್ಟಣೆ ನೆರೆದಿದೆ. ಈ ವಿಚಾರ ಪೊಲೀಸರ ಗಮನಕ್ಕೂ ಬಂದಿದ್ದು ಸ್ಥಳಕ್ಕೆ ಬಂದ ಅವರು ಗುಂಪನ್ನು ಚದುರಿಸಿ ರಾಜೇಶ್ ಮೌರ್ಯನನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೆ ಅಂಗಡಿ ಬಂದ್ ಮಾಡಿಸಿದ್ದು, ರಾಜೇಶ್ ಮೌರ್ಯ ವಿರುದ್ಧ ಸಾರ್ವಜನಿಕ ಶಾಂತಿಗೆ ಭಂಗ ತಂದ ಆರೋಪವನ್ನು ಹೊರಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read