ಉತ್ತರ ಪ್ರದೇಶದ ಪ್ರತಿಷ್ಠಿತ ಶಾಲೆಯೊಂದರಲ್ಲಿ ನಡೆದಿರುವ ಆಘಾತಕಾರಿ ಘಟನೆಯಲ್ಲಿ ಪ್ರಾಂಶುಪಾಲ – ಶಿಕ್ಷಕಿ ಜೊತೆ ಶಾಲಾ ಕೊಠಡಿಯಲ್ಲೇ ಸರಸ ಸಲ್ಲಾಪ ನಡೆಸಿದ್ದಾನೆ. ಈ ಘಟನೆಯ ಫೋಟೋ ಮತ್ತು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿದ್ಯಾ ದೇಗುಲದಲ್ಲಿ ಇಂತಹ ಕೃತ್ಯ ನಡೆಸಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಜಾನುಪುರ್ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಕೊಠಡಿಯಲ್ಲಿ ಅಳವಡಿಸಲಾಗಿದ್ದ ಮಹನೀಯರ ಫೋಟೋಗಳ ಮುಂದೆಯೇ ಪ್ರಾಂಶುಪಾಲ ಈ ನೀಚ ಕೃತ್ಯ ಎಸಗಿದ್ದಾನೆ. ಅಟಲ್ ಬಿಹಾರಿ ವಾಜಪೇಯಿ, ಅಭಿನಂದನ್ ವರ್ತಮಾನ್, ಮಹಾರಾಣಾ ಪ್ರತಾಪ್ ಹಾಗೂ ಭಗತ್ ಸಿಂಗ್ ಅವರ ಫೋಟೋಗಳ ಮುಂದೆ ಪ್ರಾಂಶುಪಾಲ ಹಾಗೂ ಶಿಕ್ಷಕಿ ಸರಸ ಸಲ್ಲಾಪ ನಡೆಸಿದ್ದಾರೆ.
ಈ ಘಟನೆ ಯಾವಾಗ ನಡೆದಿದೆ ಎಂಬುದು ಸ್ಪಷ್ಟವಾಗಿಲ್ಲವಾದರೂ ಆರು ನಿಮಿಷಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಸಾರ್ವಜನಿಕರು ಪ್ರಾಂಶುಪಾಲ ಹಾಗು ಶಿಕ್ಷಕಿ ವಿರುದ್ಧ ಕಿಡಿ ಕಾರಿದ್ದಾರೆ. ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಈವರೆಗೆ ಪ್ರಕರಣ ದಾಖಲಾಗಿಲ್ಲವೆಂದು ಹೇಳಲಾಗಿದ್ದು, ಇದೀಗ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ.
https://twitter.com/News1IndiaTweet/status/1809941418212786289?ref_src=twsrc%5Etfw%7Ctwcamp%5Etweetembed%7Ctwterm%5E1809941418212786289%7Ctwgr%5E1f46cfb908d113447d44c00fcb0589e2631bc249%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fupshockerschoolprincipalcaughtoncameramakingoutwithfemaleteacherunderphotosofgreatpersonalitiesinjaunpur-newsid-n621071963