ಪರಸ್ಪರ ತಬ್ಬಿಕೊಂಡು ಹೆದ್ದಾರಿಯಲ್ಲಿ ಬೈಕ್ ಸವಾರಿ; ಯುವ ಜೋಡಿಯ ಸ್ಟಂಟ್ ವಿಡಿಯೋ ವೈರಲ್

article-image

ಹೆದ್ದಾರಿಯೊಂದರಲ್ಲಿ ಪರಸ್ಪರ ತಬ್ಬಿಕೊಂಡು ಯುವಜೋಡಿಯೊಂದು ಬೈಕ್ ಸವಾರಿ ಮಾಡಿದೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ವೇಗವಾಗಿ ಚಲಿಸ್ತಿದ್ದ ಬೈಕಿನಲ್ಲಿ ಜೋಡಿಯೊಂದು ಸಾರ್ವಜನಿಕವಾಗಿ ಪ್ರೀತಿ ತೋರಿಸುತ್ತಾ ಸ್ಟಂಟ್ ಮಾಡಿದೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿದಾಡುತ್ತಿದೆ.

ಹೆದ್ದಾರಿಯಲ್ಲಿ ಯುವ ಜೋಡಿ ಬೈಕ್‌ನಲ್ಲಿ ಹೋಗುತ್ತಿದ್ದು, ಯುವತಿ ಬೈಕ್ ಟ್ಯಾಂಕ್ ಮೇಲೆ ಕುಳಿತಿದ್ದು ಆಕೆ ಸವಾರನನ್ನು ತಬ್ಬಿಕೊಂಡಿದ್ದಾಳೆ. ಸಿಂಭೋಲಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಈ ಘಟನೆ ನಡೆದಿದೆ. ಬೈಕ್ ಸವಾರ ಮತ್ತು ಯುವತಿ ಹೆಲ್ಮೆಟ್ ಧರಿಸದ ಕಾರಣ ಅವರು ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಮತ್ತು ಯಾವುದೇ ಸುರಕ್ಷತೆಯಿಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾಯಕಾರಿ ಸಾಹಸ ಪ್ರದರ್ಶಿಸಿದ್ದಾರೆ.

ಇಂತಹ ಸಾಹಸಗಳು ಸವಾರರಿಗೆ ಹಾಗೂ ಪಾದಚಾರಿಗಳಿಗೆ ಮತ್ತು ರಸ್ತೆಯಲ್ಲಿ ಚಲಿಸುವ ಇತರ ವಾಹನಗಳಿಗೆ ಮಾರಕವಾಗಬಹುದು. ಬೈಕ್ ಪೆಟ್ರೋಲ್ ಟ್ಯಾಂಕ್ ಮೇಲೆ ಕುಳಿತು ತನ್ನನ್ನು ತಬ್ಬಿಕೊಂಡಿರುವ ಯುವತಿಯ ಮೇಲೆ ಗಮನ ಹರಿಸುವ ಸವಾರ ಅಪಘಾತಕ್ಕೀಡಾಗಬಹುದು. ಈ ದೃಶ್ಯವನ್ನು ಇದೇ ಹೆದ್ದಾರಿಯಲ್ಲಿ ಹಾದು ಹೋದ ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ.

ಇಂತಹದ್ದೇ ಮತ್ತೊಂದು ಘಟನೆ ರಾಜಸ್ಥಾನದಿಂದ ಬೆಳಕಿಗೆ ಬಂದಿದ್ದು ಜೈಪುರದಲ್ಲಿ ವೇಗವಾಗಿ ಚಲಿಸುವ ಬೈಕ್‌ನಲ್ಲಿ ಜೋಡಿಯೊಂದು ಮುತ್ತಿಕ್ಕುತ್ತಿರುವ ದೃಶ್ಯ ಕಂಡು ಬಂದಿದೆ. ಘಟನೆಯ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.

https://twitter.com/lokeshRlive/status/1711574875188686855?ref_src=twsrc%5Etfw%7Ctwcamp%5Etweetembed%7Ctwterm%5E171157487518

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read