ಉತ್ತರಪ್ರದೇಶದ ವಾರಣಸಿಯಲ್ಲಿ ವಿದೇಶಿ ಯುವತಿಯೊಬ್ಬರು ರಸ್ತೆಯಲ್ಲಿ ಅನುಚಿತವಾಗಿ ವರ್ತಿಸಿರೋ ಘಟನೆ ನಡೆದಿದೆ.
ನಗರದ ಮಾಂಡುವಾಡಿಹ್ ಕ್ರಾಸ್‌ರೋಡ್‌ಗೆ ಸಮೀಪ ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಯುವತಿ ಕಾರ್ ನ ಮೇಲೆ ಕುಳಿತು ಅವಾಂತರ ಸೃಷ್ಟಿಸಿದರು. ಇದರಿಂದಾಗಿ ಸ್ವಲ್ಪ ಸಮಯದವರೆಗೆ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು.
ಅಂತಿಮವಾಗಿ ಯುವತಿಯನ್ನು ಕಾರಿನಿಂದ ಕೆಳಗಿಳಿಸಲಾಯಿತು. ಬಳಿಕ ಪೊಲೀಸರು ಆಕೆಯನ್ನು ಕರೆದುಕೊಂಡು ಹೋಗಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯುವತಿಯ ಚೇಷ್ಟೆಗಳನ್ನು ತೋರಿಸಲಾಗಿದೆ. ಆದರೆ ಆಕೆಯ ಕೃತ್ಯದ ಹಿಂದಿನ ಉದ್ದೇಶ ತಿಳಿದಿಲ್ಲ.
https://twitter.com/SG6377/status/1666437876199071744?ref_src=twsrc%5Etfw%7Ctwcamp%5Etweetembed%7Ctwterm%5E1666437876199071744%7Ctwgr%5Ebb8068619aa4201b7dda3b4a3ad4bcb2f0bd0133%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Fthefreepressjournal-epaper-dhecf5ddffe11b4f36b496f4bee6e60122%2Fupnewsforeignwomancreatesruckussittingoncarroofinvaranasivideogoesviral-newsid-n507378768