ಪೊಲೀಸ್​ ಸ್ಟೇಷನ್​ ಆವರಣದಲ್ಲೇ ರೀಲ್ಸ್; ಇಬ್ಬರು ಯುವಕರು ಅಂದರ್

ಪೊಲೀಸ್​ ಠಾಣೆಯ ಎದುರು ರೀಲ್ಸ್​ ಮಾಡಿದ ಇಬ್ಬರು ಯುವಕರನ್ನು ಬಂಧಿಸಿದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಗೊಂಡಾದ ವಜೀರ್​ಗಂಜ್​ ಪೊಲೀಸ್​ ಠಾಣೆಯ ಎದುರು ಇಬ್ಬರು ಯುವಕರು ರೀಲ್​ ಮಾಡಿದ್ದರು ಎನ್ನಲಾಗಿದೆ.‌

ಈ ಘಟನೆ ಸಂಬಂಧ ಸೋಶಿಯಲ್​ ಮೀಡಿಯಾದಲ್ಲಿ ವೀಡಿಯೋ ವೈರಲ್​ ಆಗುತ್ತಿದ್ದಂತೆಯೇ ಪೊಲೀಸ್​ ಠಾಣೆಯ ಎದುರು ವಿಡಿಯೋ ಚಿತ್ರೀಕರಣ ಮಾಡುವುದು ಕಾನೂನುಬಾಹಿರವೇ ಅಥವಾ ಅದಕ್ಕೆ ನಿಷೇಧ ಹೇರಲಾಗಿದೆಯಾ ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.

ಬಂಧನದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಶೇರ್​ ಮಾಡಿರುವ ವಜೀರ್​ಗಂಜ್​ ಠಾಣಾ ಪೊಲೀಸರು, ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್​ ಮಾಡಿದ ಇಬ್ಬರನ್ನು ಬಂಧಿಸಿದ್ದೇವೆ. ಯುವಕರು ತಾವು ಮಾಡಿದ ರೀಲ್ಸ್​ನ್ನು ಎಕ್ಸ್​ನಲ್ಲಿ ಶೇರ್​ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಪೊಲೀಸರ ಈ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕರು ಪೊಲೀಸ್​ ಠಾಣೆಯ ಆವರಣದಲ್ಲಿ ರೀಲ್ಸ್ ಮಾಡುವುದು ಅಪರಾಧವೇ ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಪೊಲೀಸ್​ ಠಾಣೆ ಆವರಣದ ವಿಡಿಯೋ ಮಾಡೋದ್ರಿಂದ ಕಳ್ಳರಿಗೆ ಏನಾದ್ರೂ ಪ್ರೂಫ್​ ನೀಡಿದಂತೆ ಆಗುತ್ತದೆಯೇ ಎಂದು ಹೇಳೋ ಮೂಲಕ ಪೊಲೀಸರಿಗೆ ಟಾಂಗ್​ ನೀಡಿದ್ದಾರೆ.

https://twitter.com/cmc_pankaj/status/1702882887870099501?ref_src=twsrc%5Etfw%7Ctwcamp%5Etweetembed%7Ctwterm%5E1702883878334345527%7Ctwgr%5E5580b88f5b12da1ab905a495c5cac745f6c167c6%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fup-viral-video-2-youths-arrested-for-creating-reel-in-front-of-wazirganj-police-station-netizens-question-the-arrest

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read