ಸರ್ಕಾರಿ ಸೌಲಭ್ಯ ಪಡೆಯಲು ಅಣ್ಣ –ತಂಗಿ ಮದುವೆ ಪ್ಲಾನ್

ಉತ್ತರ ಪ್ರದೇಶದ ಮೊರಾದಾಬಾದ್‌ ನಲ್ಲಿ ಸಿಎಂ ಸಾಮೂಹಿಕ ವಿವಾಹ ಯೋಜನೆ ಸೌಲಭ್ಯ ಪಡೆಯಲು ಸುಳ್ಳು ಮಾಹಿತಿ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.

ಸರ್ಕಾರಿ ಸವಲತ್ತುಗಳನ್ನು ಪಡೆಯಲು ಸಹೋದರ ಮತ್ತು ಸಹೋದರಿ ವಿವಾಹವಾಗಲು ಯೋಜಿಸಿರುವ ಸಂಗತಿ ಪರಿಶೀಲನೆ ವೇಳೆ ಬಯಲಾಗಿದೆ. ಮುಖ್ಯಮಂತ್ರಿ ಸಾಮೂಹಿಕ ವಿವಾಹ ಯೋಜನೆಯಡಿ 35,000 ರೂ. ಮತ್ತು ಇತರ ಸೌಲಭ್ಯ ಪಡೆಯಲು ಈ ರೀತಿ ಮಾಡಿದ್ದಾರೆ.

ಈ ವರ್ಷ ಮೊರಾದಾಬಾದ್‌ನಿಂದ 3,451 ದಂಪತಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ, ಇದು ಆರ್ಥಿಕ ಸಹಾಯದ ಅಗತ್ಯವಿರುವ ಕುಟುಂಬಗಳನ್ನು ಬೆಂಬಲಿಸುವ ಯೋಜನೆಯಾಗಿದೆ. ಇದುವರೆಗೆ 8,519 ಅರ್ಜಿಗಳು ಬಂದಿವೆ. ಅರ್ಜಿಗಳನ್ನು ಸರ್ಕಾರಿ ಸಿಬ್ಬಂದಿ ಹಂತಹಂತವಾಗಿ ಪರಿಶೀಲಿಸಿದ್ದು, ಪ್ರಾಥಮಿಕ ತನಿಖೆಯಲ್ಲಿ ಈಗಾಗಲೇ ಹಲವು ವಂಚನೆ ಪ್ರಕರಣಗಳನ್ನು ಬಹಿರಂಗವಾಗಿವೆ.

ಈ ನಕಲಿ ಅರ್ಜಿಗಳು ಪತ್ತೆಯಾದ ನಂತರ ದೂರು ನೀಡಲಾಗಿದೆ. ಅರ್ಜಿದಾರರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶೈಲೇಂದ್ರ ಗೌತಮ್ ಮಾಹಿತಿ ನೀಡಿದ್ದಾರೆ.

ಜನವರಿಯಲ್ಲಿ ನಡೆಯಲಿರುವ ಸಾಮೂಹಿಕ ವಿವಾಹದ ಸಿದ್ಧತೆಗಾಗಿ ಅರ್ಜಿಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುತ್ತಿದೆ. ಅಣ್ಣ –ತಂಗಿ, ಚಿಕ್ಕಪ್ಪ –ಸೊಸೆ ಮದುವೆಯಾಗುವ ಬಗ್ಗೆ ಅರ್ಜಿ ಸಲ್ಲಿಸಿರುವುದು ದಾಖಲೆಗಳ ಪರಿಶೀಲನೆ ವೇಳೆ ಪತ್ತೆಯಾಗಿದ್ದು, ಅಂತಹ ಅನೇಕ ಅರ್ಜಿದಾರರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read