Video | ಇಬ್ಬರು ಪುರುಷರೊಂದಿಗಿದ್ದ ಪತ್ನಿ; ಹೋಟೆಲ್ ಗೆ ನುಗ್ಗಿ ಚಪ್ಪಲಿಯಲ್ಲಿ ಥಳಿಸಿದ ಪತಿ

ಹೋಟೆಲ್ ವೊಂದರಲ್ಲಿ ಇಬ್ಬರು ಪರಪುರುಷರ ಜೊತೆ ತನ್ನ ಪತ್ನಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಇದ್ದುದನ್ನು ಕಂಡು ಗಂಡ ಮೂವರನ್ನೂ ಹಿಡಿದು ಥಳಿಸಿರುವ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ನಡೆದಿದೆ.

ಗಲಾಟೆಯ ವಿಡಿಯೋ ಕ್ಯಾಮರಾದಲ್ಲಿ ಸೆರೆಯಾಗಿದೆ. ಪತ್ನಿಯ ಮೇಲೆ ಅನುಮಾನಗೊಂಡ ಪತಿ ತನ್ನ ಪತ್ನಿ ಮತ್ತು ಇಬ್ಬರು ಪುರುಷರು ಇದ್ದ ಹೋಟೆಲ್ ಕೋಣೆಗೆ ನುಗ್ಗಿದಾಗ ಗಲಾಟೆ ಸಂಭವಿಸಿದೆ. ಮೂವರ ನಡುವೆಯೂ ಜೋರು ಗಲಾಟೆಯಾಗಿದ್ದು ಪತಿ ತನ್ನ ಪತ್ನಿ ಮತ್ತು ಇಬ್ಬರು ಪುರುಷರಿಗೆ ಚಪ್ಪಲಿಯಿಂದ ಥಳಿಸುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದಂಪತಿ ಕಳೆದ ಒಂದು ವರ್ಷದಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಮಹಿಳೆ ಮತ್ತು ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ತನ್ನ ಪತ್ನಿ ಮತ್ತು ಇಬ್ಬರು ಪುರುಷರ ವಿರುದ್ಧ ಅನುಚಿತ ವರ್ತನೆ ಆರೋಪದ ಮೇಲೆ ವೈದ್ಯ ದೂರು ದಾಖಲಿಸಿದ್ದಾರೆ.
ಪೊಲೀಸರ ಪ್ರಕಾರ ಮಹಿಳೆ ಇದುವರೆಗೆ ತನ್ನ ಪತಿ ವಿರುದ್ಧ ಯಾವುದೇ ದೂರು ದಾಖಲಿಸಿಲ್ಲ.

https://twitter.com/HateDetectors/status/1788991581065998841?ref_src=twsrc%5Etfw%7Ctwcamp%5Etweetembed%7Ctwterm%5E1788991581065998841%7Ctwgr%5E48bb4412e3bd24c4c8aaa793b00d4d214e44f534%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Fdeccanherald-epaper-dh881cfe1ab97d482fb3abb8994f502a8b%2Fupmanfindswifewithtwoothermeninhotelroomthrashestrioreport-newsid-n607683708

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read