ಭಾರತದಲ್ಲಿ ಅರೇಂಜ್ಡ್ ಮ್ಯಾರೇಜ್‌ಗಳು ಕೇವಲ ವಧು-ವರನ ನಡುವೆ ಬಾಂಧವ್ಯವಷ್ಟೇ ಅಲ್ಲ, ಅವರ ಕುಟುಂಬದ ನಡುವೆಯೂ ಸಹ ಬಾಂಧವ್ಯ ಬೆಸೆಯುತ್ತವೆ. ಹೀಗಾಗಿ ಅವರ ಹಿನ್ನೆಲೆ ಬಗ್ಗೆ ಹೆಚ್ಚು ಗಮನ ಹರಿಸುತ್ತಾರೆ.
ಉತ್ತರ ಪ್ರದೇಶದ ಒಂದು ಘಟನೆಯು ಜನರ ಇಂತಹ ಮನಸ್ಥಿತಿಗೆ ಸಾಕ್ಷಿಯಾಗಿದೆ. ಅತ್ತೆಯ ವರ್ತನೆಯಿಂದ ವರನೊಬ್ಬ ತನ್ನ ಮದುವೆಯನ್ನೇ ರದ್ದುಗೊಳಿಸಿದ್ದಾನೆ. ವರದಿಯ ಪ್ರಕಾರ ವಿವಾಹಪೂರ್ವ ಸಂಭ್ರಮದ ವೇಳೆ ಭಾವಿ ಅತ್ತೆ ಸಿಗರೇಟ್ ಸೇದುತ್ತಾ, ನೃತ್ಯ ಮಾಡಿದ್ದರಿಂದ ಅಸಮಾಧಾನಗೊಂಡ ವರ ಮದುವೆ ರದ್ದುಗೊಳಿಸಿದ್ದಾನೆ.
ಸಂಭಾಲ್ ಜಿಲ್ಲೆಯ ವರನೊಬ್ಬ ರಾಜಪುರದ ಹುಡುಗಿಯನ್ನು ಮದುವೆಯಾಗಲಿದ್ದ. ಜೂನ್ 27 ರಂದು ನಿಗದಿಯಾಗಿದ್ದ ವಿವಾಹದ ಮೊದಲು ನವಜೋಡಿ ತಮ್ಮ ವಿವಾಹಪೂರ್ವ ಸಂಭ್ರಮಾಚರಣೆ ಆಯೋಜಿಸಿದ್ದಾರೆ.
ಸ್ಥಳಕ್ಕೆ ಆಗಮಿಸಿದ ವರ ಧಾರ್ಮಿಕ ವಿಧಿವಿಧಾನಗಳನ್ನು ಪ್ರಾರಂಭಿಸಲು ಮಂಟಪದಲ್ಲಿ ಕಾಯುತ್ತಿದ್ದನು. ಆ ಸಮಯದಲ್ಲಿ ನೆರೆದ ಅತಿಥಿಗಳು ನೃತ್ಯ ಮಾಡುತ್ತಾ ಸಂಭ್ರಮಿಸಲು ಆರಂಭಿಸಿದರು.
ಆಗ ಅನಿರೀಕ್ಷಿತ ಘಟನೆ ನಡೆದಿದ್ದು, ವಧುವಿನ ತಾಯಿ ಸಿಗರೇಟು ಸೇದುತ್ತಾ ಗುಂಪಿನೊಂದಿಗೆ ಡ್ಯಾನ್ಸ್ ಮಾಡಿದರು. ಇದನ್ನು ನೋಡಿದ ವರ ಸಂಪೂರ್ಣವಾಗಿ ಗಾಬರಿಗೊಂಡು ಆಚರಣೆಗಳನ್ನು ನಿಲ್ಲಿಸಲು ಮತ್ತು ಮದುವೆಯನ್ನು ರದ್ದುಗೊಳಿಸಲು ನಿರ್ಧರಿಸಿದ್ದಾನೆ.
ವರನ ನಿರ್ಧಾರದಿಂದ ಎರಡು ಕುಟುಂಬಗಳ ನಡುವೆ ಜಗಳ ನಡೆದು ಅಂತಿಮವಾಗಿ ಮದುವೆಯನ್ನು ರದ್ದುಗೊಳಿಸಲಾಯಿತು. ನಂತರ ಕುಟುಂಬಸ್ಥರ ನಡುವೆ ಸಮಸ್ಯೆ ಬಗೆಹರಿಸಲು ಪಂಚಾಯಿತಿ ಕರೆಯಲಾಗಿತ್ತು. ಪಂಚಾಯಿತಿಯಲ್ಲಿ ಎರಡೂ ಕುಟುಂಬಗಳು ಮತ್ತೆ ಸಂಬಂಧವನ್ನ ಮುಂದುವರೆಸಲು ಒಪ್ಪಿಗೆ ಸೂಚಿಸಿದ್ದವು.
https://twitter.com/Benarasiyaa/status/1676111313821642753?ref_src=twsrc%5Etfw%7Ctwcamp%5Etweetembed%7Ctwterm%5E1676111313821642753%7Ctwgr%5E82a9b7bd36a3164f6670184b9d24e0f3eb55b9e7%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fup-groom-calls-off-wedding-over-mother-in-law-dancing-and-smoking