ರೋಗಿಗಳಿಂದ 1 ರೂ. ಹೆಚ್ಚುವರಿ ಶುಲ್ಕ ಪಡೆದು ಕೆಲಸ ಕಳೆದುಕೊಂಡ ನೌಕರ; ಜನಪ್ರತಿನಿಧಿಯಿಂದ ಪರಿಶೀಲನೆ ವಿಡಿಯೋ ವೈರಲ್

ಸಮುದಾಯ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಂದ ನಿಗದಿತ ಶುಲ್ಕಕ್ಕಿಂತ 1 ರೂ. ಹೆಚ್ಚು ವಸೂಲಿ ಮಾಡಿದ ಗುತ್ತಿಗೆ ಉದ್ಯೋಗಿಯನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲಿ ಉದ್ಯೋಗಿ ನಿಗದಿತ 1 ರೂ. ಬದಲಿಗೆ ವೈದ್ಯರು ನೀಡುವ ಔಷಧಿ ಚೀಟಿಗಾಗಿ 2 ರೂ. ವಸೂಲಿ ಮಾಡಿದ್ದರಿಂದ ಕೆಲಸ ಕಳೆದುಕೊಂಡಿದ್ದಾನೆ.

ಜಗದೌರ್ ಸಿಎಚ್‌ಸಿಯಲ್ಲಿ ಸ್ಥಳೀಯ ಬಿಜೆಪಿ ಶಾಸಕ ಪ್ರೇಮ್ ಸಾಗರ್ ಪಟೇಲ್ ಅವರು ಅಚ್ಚರಿಯ ಭೇಟಿ ನೀಡಿ ತಪಾಸಣೆ ನಡೆಸಿದ ನಂತರ ಫಾರ್ಮಾಸಿಸ್ಟ್ ನನ್ನು ವಜಾಗೊಳಿಸಲಾಗಿದೆ. ಸಾರ್ವಜನಿಕರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಸಿಸ್ವಾ ಶಾಸಕರು ದಿಢೀರ್ ಭೇಟಿ ನೀಡಿ ತಪಾಸಣೆ ನಡೆಸಿದರು.

ರೋಗಿಗಳು ಮತ್ತು ಅವರ ಕುಟುಂಬಗಳೊಂದಿಗೆ ಸಂವಾದ ನಡೆಸಿದ ಶಾಸಕರು ಆಸ್ಪತ್ರೆಯಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಂಡರು. ಹೆರಿಗೆಗೆ ಸರ್ಕಾರದ ನೆರವು ಪಡೆಯುವಲ್ಲಿ ಆಪಾದಿತ ವಿಳಂಬಗಳು, ರಾತ್ರಿಯಲ್ಲಿ ಮಹಿಳಾ ವೈದ್ಯರ ಗೈರುಹಾಜರಿ ಮತ್ತು ಖಾಸಗಿ ಮೆಡಿಕಲ್ ಸ್ಟೋರ್‌ಗಳಲ್ಲಿ ಔಷಧಿಗಳನ್ನು ಪಡೆಯಲು ಸೂಚಿಸುವ ಅಭ್ಯಾಸ ಸೇರಿದಂತೆ ಹಲವು ಸಮಸ್ಯೆಗಳನ್ನು ಪತ್ತೆಹಚ್ಚಿದರು.

“ಬಡ ರೋಗಿಗಳಿಂದ ಒಂದು ರೂಪಾಯಿ ಹೆಚ್ಚು ಶುಲ್ಕ ವಿಧಿಸಲು ನಿಮಗೆ ಎಷ್ಟು ಧೈರ್ಯ?” ಎಂದು ಶಾಸಕರು ಫಾರ್ಮಾಸಿಸ್ಟ್ ನನ್ನು ಪ್ರಶ್ನಿಸಿದ್ದು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗುತ್ತಿಗೆ ಉದ್ಯೋಗಿ ಸಂಜಯ್ ಎಂದು ಗುರುತಿಸಲಾದ ಫಾರ್ಮಾಸಿಸ್ಟ್ ನನ್ನು ವಜಾಗೊಳಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read