Video: ಕುಡಿದು ಹಳಿ ಮೇಲೆ ಮಲಗಿದ್ದ ವ್ಯಕ್ತಿ; ರೈಲು ಮೈಮೇಲೆ ಹಾದು ಹೋದರೂ ಪವಾಡಸದೃಶ ರೀತಿಯಲ್ಲಿ ಪಾರು…!

ರೈಲು ಹಳಿ ಮೇಲೆ ಮಲಗಿದ್ದ ಕುಡುಕನೊಬ್ಬ ಪವಾಡಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನಡೆದಿದೆ.

ವರದಿಗಳ ಪ್ರಕಾರ ಗುರುವಾರ ಮುಂಜಾನೆ 3:30 ರ ಸುಮಾರಿಗೆ ಬಿಜ್ನೋರ್ ನಗರದ ಆದಂಪುರ ರೈಲ್ವೇ ಕ್ರಾಸಿಂಗ್‌ನಲ್ಲಿ ವ್ಯಕ್ತಿಯೊಬ್ಬರು ರೈಲಿಗೆ ಡಿಕ್ಕಿ ಹೊಡೆದಿರಬಹುದು ಎಂದು ರೈಲು ಚಾಲಕ ಪೊಲೀಸರಿಗೆ ವರದಿ ಮಾಡಿದ್ದಾರೆ.

ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿದಾಗ ನೇಪಾಳದ ಅಮರ್ ಬಹದ್ದೂರ್ ಎಂದು ಗುರುತಿಸಲಾದ ವ್ಯಕ್ತಿ ರೈಲ್ವೆ ಹಳಿಯ ಮಧ್ಯದಲ್ಲಿ ಬಿದ್ದಿರುವುದು ಪತ್ತೆಯಾಗಿದೆ.

ಅದೃಷ್ಟವಶಾತ್ ಬಹದ್ದೂರ್ ಯಾವುದೇ ಹಾನಿಗೊಳಗಾಗದೆ ಜೀವಂತವಾಗಿದ್ದರು. ಘಟನೆಯ ವಿಡಿಯೋ ವೈರಲ್ ಆಗುತ್ತಿದ್ದು ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸುತ್ತಿದ್ದಂತೆಯೇ ವ್ಯಕ್ತಿ ಟ್ರ್ಯಾಕ್‌ನಿಂದ ಎದ್ದು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವರದಿಗಳ ಪ್ರಕಾರ ಬಹದ್ದೂರ್ ಕುಡಿದ ಸ್ಥಿತಿಯಲ್ಲಿ ಹಳಿಗಳ ಮೇಲೆ ಮಲಗಿದ್ದನ್ನು ಪೊಲೀಸರು ಗಮನಿಸಿದ್ದಾರೆ. ಕುಡಿದು ಮಲಗಿದ್ದ ಬಹದ್ದೂರ್ ಮೇಲೆ ಮಸ್ಸೂರಿ ಎಕ್ಸ್ ಪ್ರೆಸ್ ರೈಲು ನೇರವಾಗಿ ಹಾದು ಹೋಗಿತ್ತು. ರೈಲು ಚಾಲಕ ಆರಂಭದಲ್ಲಿ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಪರಿಶೀಲಿಸಿದ ನಂತರ ಬಹದ್ದೂರ್ ನನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

https://twitter.com/SachinGuptaUP/status/1821535153199444061?ref_src=twsrc%5Etfw%7Ctwcamp%5Etweetembed%7Ctwterm%5E1821535153199444061%7Ctwgr%5E181c93

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read