ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಬೈಕ್‌ನಲ್ಲಿ ಬಂದ ನಾಲ್ವರು ಯುವಕರು ಮಹಿಳೆಗೆ ಕಿರುಕುಳ ನೀಡಿದ್ದಾರೆ. ಮಗುವನ್ನು ಎತ್ತಿಕೊಂಡು ತೆರಳುತ್ತಿದ್ದ ಮಹಿಳೆಯೊಂದಿಗೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿದ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಒಂದೇ ಬೈಕ್‌ನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ನಡುರಸ್ತೆಯಲ್ಲೇ ಮಹಿಳೆಗೆ ಕಿರುಕುಳ ನೀಡಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ.
ರಾಜ್ಯದಲ್ಲಿ ಮಹಿಳೆಯರ ಮೇಲಿನ ಅಪರಾಧಗಳನ್ನು ತಡೆಯಲು ಉತ್ತರ ಪ್ರದೇಶ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದರೂ ಕಾನೂನುಕ್ರಮದ ಭಯವಿಲ್ಲದೇ ಕಿಡಿಗೇಡಿಗಳು ಇಂತಹ ಕೃತ್ಯವೆಸಗಿದ್ದಾರೆ.
ಗಾಜಿಯಾಬಾದ್‌ನ ಮುರಾದ್‌ನಗರದ ಖುರ್ರಂಪುರ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ. ಮಹಿಳೆ ತನ್ನ ಹೆಗಲ ಮೇಲೆ ಮಗುವನ್ನು ಹೊತ್ತುಕೊಂಡು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಾಲ್ವರು ಯುವಕರು ಒಂದೇ ಬೈಕ್‌ನಲ್ಲಿ ಇನ್ನೊಂದು ದಿಕ್ಕಿನಿಂದ ಮಗುವನ್ನು ಹೊತ್ತ ಮಹಿಳೆಯ ಬಳಿ ಬರುತ್ತಿರುವಾಗ ಬೈಕ್ ನಲ್ಲಿ ಕೊನೆಯದಾಗಿ ಕುಳಿತ ವ್ಯಕ್ತಿ ಮಹಿಳೆಯತ್ತ ಕೈ ಚಾಚಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ.
ಬೈಕ್ ಸವಾರನು ವೇಗವಾಗಿ ಸ್ಥಳದಿಂದ ಪರಾರಿಯಾಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಬಂಧಿಸಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
#Ghaziabad मुरादनगर इलाके में 10 सितंबर 2024 को मनचलों द्वारा सरेआम सरेराह एक महिला से छेड़छाड़ की गई । एक बाइक पर सवार 4 मनचलों ने महिला से की छेड़छाड़। घटना #CCTV कैमरे में हुई कैद। पुलिस ने अभी तक पीड़िता की FIR तक दर्ज नही की है। @Uppolice @ghaziabadpolice @myogiadityanath pic.twitter.com/RqQn6bpJRF
— प्रवीन मिश्रा/praveen mishra 🇮🇳 (@Praveen_mishra9) September 11, 2024
उक्त प्रकरण के संबंध में थाना मुरादनगर पुलिस द्वारा तहरीर प्राप्त कर सुसंगत धाराओं में अभियोग पंजीकृत करते हुए 02 आरोपी अभियुक्तों को हिरासत में लिया जा चुका है । अग्रिम विधिक कार्यवाही प्रचलित है।
— DCP RURAL COMMISSIONERATE GHAZIABAD (@DCPRuralGZB) September 11, 2024