ತಪಾಸಣೆಗೆಂದು ವಿದ್ಯಾರ್ಥಿನಿ ನಿಲಯಕ್ಕೆ ತೆರಳಿದ್ದ ಅಧಿಕಾರಿಗಳಿಗೆ ಶಾಕ್; 100 ಹುಡುಗಿಯರ ಪೈಕಿ ಕೇವಲ 11 ಮಾತ್ರ ಹಾಜರಿ…!

UP: 89 girls missing during night inspection at state-run

ತಪಾಸಣೆಗೆಂದು ರಾಜ್ಯ ಸರ್ಕಾರದ ಅನುದಾನಿತ ವಿದ್ಯಾರ್ಥಿನಿ ನಿಲಯಕ್ಕೆ ರಾತ್ರಿ ವೇಳೆ ಭೇಟಿ ನೀಡಿದ್ದ ಅಧಿಕಾರಿಗಳಿಗೆ ಶಾಕಿಂಗ್ ಸಂಗತಿ ತಿಳಿದುಬಂದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಗೊಂಡಾ ಜಿಲ್ಲೆಯ ಪಾರಸ್ಪುರದ ಕಸ್ತೂರ್ಬಾ ಗಾಂಧಿ ವಿದ್ಯಾರ್ಥಿನಿಯರ ವಸತಿ ಶಾಲೆಗೆ ಜಿಲ್ಲಾಧಿಕಾರಿ ನೇಹಾ ಶರ್ಮಾ ನೇತೃತ್ವದಲ್ಲಿ ಭೇಟಿ ನೀಡಲಾಗಿದ್ದು, ಈ ಸಂದರ್ಭದಲ್ಲಿ 100 ಹುಡುಗಿಯರ ಪೈಕಿ ಕೇವಲ 11 ಮಂದಿ ಮಾತ್ರ ವಸತಿ ನಿಲಯದಲ್ಲಿ ಇದ್ದರು ಎಂಬ ಸಂಗತಿ ಗೊತ್ತಾಗಿದೆ.

ಇನ್ನುಳಿದ 89 ಮಂದಿ ವಿದ್ಯಾರ್ಥಿನಿಯರು ರಾತ್ರಿ ವೇಳೆ ವಸತಿ ನಿಲಯದಲ್ಲಿ ಹಾಜರಿಲ್ಲದಿರುವ ಕುರಿತು ವಾರ್ಡನ್ ಸರಿತಾ ಅವರನ್ನು ತಪಾಸಣಾ ತಂಡ ಪ್ರಶ್ನಿಸಿದಾಗ ಸ್ಪಷ್ಟ ಕಾರಣ ನೀಡಿಲ್ಲವೆನ್ನಲಾಗಿದೆ. ಇದೀಗ ಈ ಕುರಿತಂತೆ ತನಿಖೆ ನಡೆಸಲು ಜಿಲ್ಲಾಧಿಕಾರಿ ನೇಹಾ ಶರ್ಮಾ ಸೂಚಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read