ನಟಿ ಉರ್ಫಿ ಜಾವೇದ್ ಶನಿವಾರದಂದು ತಮ್ಮ ಐಕಾನಿಕ್ 3D ಬಟರ್ಫ್ಲೈ ಡ್ರೆಸ್ ಅನ್ನು ಬರೋಬ್ಬರಿ 3.66 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡುವುದಾಗಿ ಘೋಷಿಸಿದ್ದಾರೆ. ಆಕೆಯ ಘೋಷಣೆಯ ನಂತರ ಬೆಲೆ ಕೇಳಿ ನೆಟ್ಟಿಗರು ಸುಸ್ತಾಗಿದ್ದಾರೆ.
ಕೆಲವರು ಇದು ತಮಾಷೆ ಎಂದು ಭಾವಿಸಿದರೆ ಒಬ್ಬ ಬಳಕೆದಾರ “ಈ ಬೆಲೆಗೆ ಮುಂಬೈನಲ್ಲಿ ಒಳ್ಳೆ ಫ್ಲಾಟ್ ಬರುತ್ತದೆ” ಎಂದು ಕಾಮೆಂಟ್ ಮಾಡಿದ್ದಾರೆ.
ಇಂಟರ್ನೆಟ್ ಸೆನ್ಸೇಷನ್ ಆಗಿರುವ ಉರ್ಫಿ ಜಾವೇದ್ ಉಡುಪಿನ ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಈಗ ಹರಾಜಿಗಿಟ್ಟಿರುವ ತನ್ನ ಐಕಾನಿಕ್ 3D ಬಟರ್ಫ್ಲೈ ಡ್ರೆಸ್ ವಿಶಿಷ್ಟ ಲಕ್ಷಣವೆಂದರೆ ಕೃತಕ ಚಿಟ್ಟೆಗಳು ಚಪ್ಪಾಳೆ ತಟ್ಟಿದಾಗ ಹೂವುಗಳಿಂದ ಹೊರಬರುವಂತೆ ಕಾಣಿಸುತ್ತದೆ.
ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋ ಹಂಚಿಕೊಂಡು ಮಾರಾಟವನ್ನು ಘೋಷಿಸಿರುವ ಉರ್ಫಿ, “ಹಾಯ್ ಮೈ ಲವ್ಲೀಸ್ ನಾನು ನನ್ನ ಬಟರ್‌ಫ್ಲೈ ಡ್ರೆಸ್ ಅನ್ನು ಮಾರಾಟ ಮಾಡಲು ನಿರ್ಧರಿಸಿದ್ದೇನೆ – ಬೆಲೆ – 36690000 ಆರ್‌ಪಿಎಸ್ ಮಾತ್ರ, (3 ಕೋಟಿ 66 ಲಕ್ಷ 99 ಸಾವಿರ ಮಾತ್ರ) ಆಸಕ್ತರು ದಯವಿಟ್ಟು DM.” ಎಂದು ಹೇಳಿದ್ದಾರೆ.