ಅವಿವಾಹಿತರಾಗಿದ್ದರೂ ವಯಸ್ಕ ಪೋಷಕರು ಒಟ್ಟಿಗೆ ವಾಸಿಸಬಹುದು: ಹೈಕೋರ್ಟ್ ಆದೇಶ

ಪ್ರಯಾಗ್ ರಾಜ್: ಅವಿವಾಹಿತರಾಗಿದ್ದರೂ ವಯಸ್ಕ ಪೋಷಕರು ಒಟ್ಟಿಗೆ ವಾಸಿಸಬಹುದು ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ.

ಬೆದರಿಕೆ ಎದುರಿಸುತ್ತಿರುವ ಅಂತರ್ಧರ್ಮೀಯ ಜೋಡಿಗೆ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಸೂಚನೆ ನೀಡಿದೆ. ಅಂತರ್ಧರ್ಮಿಯ ಪೋಷಕರ ಅಪ್ರಾಪ್ತ ವಯಸ್ಸಿನ ಪುತ್ರಿ ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಶೇಖರ್ ಬಿ. ಸರಾಫ್ ಮತ್ತು ವಿಪಿನ್ ಚಂದ್ರ ದೀಕ್ಷಿತ್ ಅವರನ್ನು ಒಳಗೊಂಡ ನ್ಯಾಯಪೀಠ ಈ ಸೂಚನೆ ನೀಡಿದೆ.

ಮಗುವಿನ ತಂದೆ ತಾಯಿ ಬೇರೆ ಧರ್ಮದವರಾಗಿದ್ದು, 2018ರಿಂದಲೂ ಒಟ್ಟಿಗೆ ವಾಸಿಸುತ್ತಿದ್ದಾರೆ. ಮಗುವಿನ ತಾಯಿಯು ಆಕೆಯ ಪತಿಯ ಮರಣದ ನಂತರ ಅನ್ಯಧರ್ಮದ ವ್ಯಕ್ತಿಯ ಜೊತೆ ವಾಸಿಸಲು ತೊಡಗಿದ್ದರು. ಅದಕ್ಕೆ ಆಕೆ ಹಿಂದಿನ ಅತ್ತೆ ಮಾವಂದಿರಿಂದ ಬೆದರಿಕೆ ಎದುರಿಸುತ್ತಿದ್ದಾರೆ.

ಬೆದರಿಕೆ ಕಾರಣಕ್ಕೆ ಮಗುವಿನ ಪೋಷಕರು ಭಯಗೊಂಡಿದ್ದಾರೆ. ವಯಸ್ಕ ಪೋಷಕರು ಮದುವೆಯಾಗದಿದ್ದರೂ ಒಟ್ಟಿಗೆ ಇರಲು ಸಂವಿಧಾನ ಅವಕಾಶ ನೀಡುತ್ತದೆ ಎಂದು ಏಪ್ರಿಲ್ 8ರ ಆದೇಶದಲ್ಲಿ ಹೈಕೋರ್ಟ್ ತಿಳಿಸಿದೆ.

ಕಾನೂನಿನ ಪ್ರಕಾರ ಮಗುವಿಗೆ ಮತ್ತು ಪೋಷಕರಿಗೆ ಭದ್ರತೆ ಪರಿಶೀಲಿಸುವಂತೆ ಸಂಭಾಲ್ ಎಸ್ಪಿ ಗೆ ನ್ಯಾಯಪೀಠ ನಿರ್ದೇಶನ ನೀಡಿದೆ.

ಈ ಮೂಲಕ ಅಲಹಾಬಾದ್ ಹೈಕೋರ್ಟ್ ಅಂತರ್ಧರ್ಮೀಯ ಲಿವ್-ಇನ್ ದಂಪತಿಗೆ ಪೊಲೀಸ್ ರಕ್ಷಣೆ ನೀಡಿದೆ. ಪ್ರೌಢಾವಸ್ಥೆಯ ವ್ಯಕ್ತಿಗಳು “ಮದುವೆಯಾಗದಿದ್ದರೂ ಸಹ” ಒಟ್ಟಿಗೆ ವಾಸಿಸಬಹುದು ಎಂದು ಸುಪ್ರೀಂ ಕೋರ್ಟ್ ಪ್ರಕರಣಗಳನ್ನು ನ್ಯಾಯಾಲಯ ಉಲ್ಲೇಖಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read