ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಲೆ ಮಹದೇಶ್ವರನಿಗೆ ಗ್ರಹಣ ತಟ್ಟಲ್ಲ, ಎಂದಿನಂತೆ ಪೂಜೆ ನೆರವೇರಲಿದ್ದು, ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ರಾಜ್ಯದ ಪ್ರಮುಖ ದೇವಾಲಯ ಮಾದಪ್ಪನ ಬೆಟ್ಟದಲ್ಲಿ ವಿಶಿಷ್ಟ ಪರಂಪರೆ ಇದೆ. ಸೂರ್ಯಗ್ರಹಣ, ಚಂದ್ರಗ್ರಹಣ ವೇಳೆ ಎಂದಿನಂತೆ ಪೂಜೆ, ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿ ದೇವಾಲಯಗಳು ಮುಚ್ಚಲ್ಪಡುತ್ತವೆ. ಆದರೆ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣದ ವೇಳೆ ಮಲೆಮಹದೇಶ್ವರನಿಗೆ ತ್ರಿಕಾಲ ಪೂಜೆ ಭಕ್ತರಿಗೆ ದರ್ಶನ ಇರುತ್ತದೆ.