ಚೆನ್ನೈ: ಐಐಟಿ ಚೆನ್ನೈನಲ್ಲಿರುವ 410 ಮೀಟರ್ ಉದ್ದದ ಹೈಪರ್ ಲೂಪ್ ಪರೀಕ್ಷಾ ಟ್ಯೂಬ್ ಏಷ್ಯಾದ ಅತಿ ಉದ್ದದ ಹೈಪರ್‌ಲೂಪ್ ಪರೀಕ್ಷಾ ಸೌಲಭ್ಯವಾಗಿದ್ದು, ಶೀಘ್ರದಲ್ಲೇ ವಿಶ್ವದ ಅತಿ ಉದ್ದವಾದ ಹೈಪರ್ ಲೂಬ್ ಸೌಲಭ್ಯವಾಗಲಿದೆ ಎಂದು ಕೇಂದ್ರ ರೈಲ್ವೆ, ಮಾಹಿತಿ ಮತ್ತು ಪ್ರಸಾರ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ನಿನ್ನೆ ಐಐಟಿ ಮದ್ರಾಸ್ ಡಿಸ್ಕವರಿ ಕ್ಯಾಂಪಸ್‌ನಲ್ಲಿರುವ ಹೈಪರ್‌ಲೂಪ್ ಪರೀಕ್ಷಾ ಸೌಲಭ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಾವು ವೀಕ್ಷಿಸಿದ ನೇರ ಪ್ರದರ್ಶನದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಪ್ರಸ್ತುತ ಅಭಿವೃದ್ಧಿ ಹಂತದಲ್ಲಿರುವ ತಂತ್ರಜ್ಞಾನವು ಇಲ್ಲಿಯವರೆಗೆ ನಡೆಸಲಾದ ಪರೀಕ್ಷೆಗಳಲ್ಲಿ ಭರವಸೆಯ ಫಲಿತಾಂಶಗಳನ್ನು ನೀಡಿರುವುದರಿಂದ ಭಾರತ ಶೀಘ್ರದಲ್ಲೇ ಹೈಪರ್‌ಲೂಪ್ ಸಾರಿಗೆಗೆ ಸಿದ್ಧವಾಗಲಿದೆ. ಈ ಯೋಜನೆಗೆ ಎಲೆಕ್ಟ್ರಾನಿಕ್ಸ್ ಘಟಕಗಳನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ(ಐಸಿಎಫ್) ನಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಹೈಪರ್‌ಲೂಪ್ ಯೋಜನೆಗೆ ರೈಲ್ವೆ ಆರ್ಥಿಕ ಹಣಕಾಸು ಮತ್ತು ತಾಂತ್ರಿಕ ಸಹಾಯವನ್ನು ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ನಾವೀನ್ಯತೆಯ ಮಹತ್ವವನ್ನು ಒತ್ತಿ ಹೇಳಿದ್ದಾರೆ ಎಂದು ವೈಷ್ಣವ್ ತಿಳಿಸಿದ್ದಾರೆ.
Longest Hyperloop tube in Asia (410 m)… soon to be the world’s longest.@iitmadras pic.twitter.com/kYknzfO38l
— Ashwini Vaishnaw (@AshwiniVaishnaw) March 16, 2025