ಪತಿಯ ಕುಡಿತದ ಚಟವನ್ನ ನಿತ್ಯ ಟೀಕಿಸುತ್ತಿದ್ದ ಪತ್ನಿ; ಬೇಸರಗೊಂಡು ಟಾಯ್ಲೆಟ್ ಕ್ಲೀನರ್ ಸೇವಿಸಿ ಪತಿ ಸಾವು

ಪತಿಯ ಕುಡಿತದ ಚಟವನ್ನ ಟೀಕಿಸುತ್ತಿದ್ದ ಪತ್ನಿಯ ನಿರಂತರ ಕಿರುಕುಳದಿಂದ ಬೇಸತ್ತು ವ್ಯಕ್ತಿಯೊಬ್ಬ ಟಾಯ್ಲೆಟ್ ಕ್ಲೀನರ್ ಸೇವಿಸಿ ಮೃತಪಟ್ಟಿರೋ ಘಟನೆ ರಾಜಸ್ಥಾನದ ಭರತ್‌ಪುರ ಜಿಲ್ಲೆಯಲ್ಲಿ ನಡೆದಿದೆ.

ಕುಮ್ಹೇರ್ ನಿವಾಸಿ ವಿನೋದ್ ಎಂದು ಗುರುತಿಸಲಾದ ವ್ಯಕ್ತಿ ನಿತ್ಯ ಮದ್ಯ ಸೇವಿಸುತ್ತಿದ್ದರು. ಈ ಅಭ್ಯಾಸದಿಂದ ಕುಪಿತಗೊಂಡ ಆತನ ಪತ್ನಿ ಕುಡಿತದ ಸಮಸ್ಯೆಯ ಬಗ್ಗೆ ಆತನೊಂದಿಗೆ ಗೊಣಗುತ್ತಿದ್ದಳು. ಪತಿಯ ಕುಡಿತದ ಚಟದಿಂದ ಇಬ್ಬರೂ ನಿತ್ಯ ಜಗಳವಾಡುತ್ತಿದ್ದರು.

ಮಾಹಿತಿ ಪ್ರಕಾರ ಕುಡಿತದ ವಿಚಾರವಾಗಿ ಪತ್ನಿ ಗದರಿದ ಹಿನ್ನೆಲೆಯಲ್ಲಿ ನಿವೋದ್ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಹೆಂಡತಿಯ ಕಿರುಕುಳದಿಂದ ಕೋಪಗೊಂಡು ತನ್ನ ಕೋಣೆಗೆ ಹೋಗಿ ಟಾಯ್ಲೆಟ್ ಕ್ಲೀನರ್ ಸೇವಿಸಿದ್ದಾನೆ.

ನಂತರ ಆತ ಕೂಗಲು ಪ್ರಾರಂಭಿಸಿದಾಗ ಅವನ ಸಹೋದರಿ ಕೋಣೆಗೆ ಬಂದಿದ್ದಾಳೆ. ತಕ್ಷಣ ಆತನನ್ನು ಭರತ್‌ಪುರದ ಆರ್‌ಬಿಎಂ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಲ್ಲಿ ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.

ಮಾಹಿತಿ ಪಡೆದ ಪೊಲೀಸರು ಆಸ್ಪತ್ರೆಗೆ ಆಗಮಿಸಿದ್ದರು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read