ವಯಸ್ಸಾದಂತೆ ಪ್ರೀತಿ ಬಲಗೊಳ್ಳುತ್ತದೆ ಎಂಬುದಕ್ಕೆ ಈ ದಂಪತಿಯೇ ಸಾಕ್ಷಿ

ಇಂದೋರ್: ಇತ್ತೀಚೆಗೆ ಕೆಲವು ಪತಿ-ಪತ್ನಿಯ ನಡುವಿನ ಸಂಬಂಧ ಕ್ಷಣಿಕವೆನಿಸಿದರೂ, ಬರ್ಫಾನಿಧಾಮ್‌ನ ಈ ವೃದ್ಧ ದಂಪತಿಯ ಪ್ರೀತಿ, ಒಡನಾಟ ಮತ್ತು ಬದ್ಧತೆಗೆ ಉದಾಹರಣೆಯಾಗಿದ್ದಾರೆ. ಕಷ್ಟದ ಸಂದರ್ಭಗಳನ್ನು ಎದುರಿಸುತ್ತಿದ್ದರೂ, ಒಬ್ಬರಿಗೊಬ್ಬರು ಬೆಂಬಲವಾಗಿ ನಿಂತಿದ್ದು, ವಯಸ್ಸಾದಂತೆ ಪ್ರೀತಿ ಬಲಗೊಳ್ಳುತ್ತದೆ ಎಂಬುದನ್ನು ಸಾಬೀತುಪಡಿಸಿದ್ದಾರೆ.

ವಯಸ್ಸು 90 ಆದರೂ ಇವರಿಬ್ಬರದ್ದು ಸುಖೀ ಸಂಸಾರ. ಬಹಳ ಸಂತೋಷದಿಂದ ಜೀವನ ಸಾಗಿಸುತ್ತಿದ್ದರು ಈ ದಂಪತಿ. ಆದರೆ, ಒಂದು ದಿನ ಅಪಘಾತಕ್ಕೆ ಸಿಲುಕಿದ್ರು. ಗಾಲಿಕುರ್ಚಿಯಲ್ಲೇ ಕುಳಿತುಕೊಳ್ಳುವಂತಾಯ್ತು. ಇದು ಸಂತೋಷದ ಜೀವನವನ್ನು ನಡೆಸುವ ಅವರ ಎಲ್ಲಾ ಭರವಸೆಗಳನ್ನು ಕಳೆದುಕೊಂಡಿತು. ಆದರೆ, ಕುಗ್ಗದ ಪತ್ನಿ ತನ್ನ ಗಂಡನ ಬೆಂಬಲವಾಗಿ ನಿಂತರು. ಪ್ರತಿದಿನ, ಹೆಂಡತಿ ತನ್ನ ಪತಿಯನ್ನು ಗಾಲಿ ಕುರ್ಚಿಯಲ್ಲಿ ಹೋಗುತ್ತಾ ವಾಕಿಂಗ್ ಮಾಡಲು ಪ್ರಾರಂಭಿಸಿದರು. ಸೂರ್ಯ ಮುಳುಗುವವರೆಗೆ ಇಬ್ಬರೂ ಸಮಯ ಕಳೆಯುತ್ತಾರೆ.

ಇನ್ನೊಂದೆಡೆ ಇದೇ ರೀತಿ ದಂಪತಿ ಸುಖೀ ಜೀವನ ನಡೆಸುತ್ತಿದ್ದಾರೆ. ಎಲ್ಲ ಕಳೆದುಕೊಂಡು ಖಿನ್ನತೆಗೊಳಗಾದ ಪತಿ ಮಾನಸಿಕ ಅಸ್ವಸ್ಥೆಗೊಳಗಾದ್ರು. ಆದರೆ, ಪತ್ನಿ ತನ್ನ ಗಂಡನಿಗೆ ಬೆಂಬಲವಾಗಿ ನಿಂತು ಆತನನ್ನು ಮಗುವಿನ ತರಹ ನೋಡಿಕೊಂಡಿದ್ದಾರೆ

ಮದುವೆಯೆಂದರೆ ಕೇವಲ ಪ್ರತಿಜ್ಞೆ ಮಾಡುವುದಲ್ಲ, ಜವಾಬ್ದಾರಿಗಳನ್ನು ಹಂಚಿಕೊಳ್ಳುವುದು ಮತ್ತು ಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುವುದು. ಪ್ರೀತಿ ಮತ್ತು ಒಡನಾಟವು ಸಾರ್ಥಕ ಜೀವನದ ನಿಜವಾದ ಸಾರವಾಗಿದೆ. ವಸ್ತು ಆಸ್ತಿ ಅಥವಾ ಸಂಪತ್ತು ಅಲ್ಲ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read