ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧೆಯೊಬ್ಬರ ಮೇಲೆ ವಿಮಾನದಲ್ಲಿನ ಕುಡುಕನೊಬ್ಬ ಮೂತ್ರ ವಿಸರ್ಜನೆ ಮಾಡಿ ಎಡವಟ್ಟು ಮಾಡಿಕೊಂಡಿರುವ ಬೆನ್ನಲ್ಲೇ ಮತ್ತೊಂದು ವಿವಾದಕ್ಕೆ ವಿಮಾನ ಸಿಲುಕಿದೆ. ವಿಮಾನದಲ್ಲಿ ನೀಡುವ ಊಟದಲ್ಲಿ ಕಲ್ಲು ಪತ್ತೆಯಾಗಿದೆ.
ಇದನ್ನು ಸರ್ವಪ್ರಿಯಾ ಸಾಂಗ್ವಾನ್ ಎನ್ನುವವರು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ದೆಹಲಿಯಿಂದ ಕಂಠ್ಮಂಡುವಿಗೆ ತೆರಳುತ್ತಿದ್ದ ವಿಮಾನದಲ್ಲಿ ತಮಗೆ ನೀಡಿದ್ದ ಊಟದಲ್ಲಿ ಕಲ್ಲು ಪತ್ತೆಯಾಗಿದೆ. ಸಣ್ಣ ಕಲ್ಲಿನ ತುಂಡು ಸಿಕ್ಕಿದೆ ಎಂದು ಊಟದ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಟ್ವೀಟ್‌ನಲ್ಲಿ, ಅವರು ಏರ್ ಇಂಡಿಯಾವನ್ನು ಟ್ಯಾಗ್ ಮಾಡಿದ್ದಾರೆ.
ಟಾಟಾ ಗ್ರೂಪ್ ಒಡೆತನದ ವಿಮಾನಯಾನ ಸಂಸ್ಥೆಯು ತೀವ್ರ ನಿರ್ಲಕ್ಷ್ಯದ ಬಗ್ಗೆ ಟೀಕಿಸಿದ್ದಾರೆ. ಕಲ್ಲು ಮುಕ್ತ ಆಹಾರವನ್ನು ನೀಡಲು ನಿಮಗೆ ಸಂಪನ್ಮೂಲಗಳು ಮತ್ತು ಹಣದ ಅಗತ್ಯವಿಲ್ಲ ಎಂದು ಏರ್ ಇಂಡಿಯಾ ಟ್ಯಾಗ್ ಮಾಡಿ ಬರೆದುಕೊಂಡಿದ್ದಾರೆ.
ಇದಕ್ಕೆ ತೀವ್ರ ಟೀಕೆಗಳು ಕೇಳಿಬಂದಿವೆ. ಇಷ್ಟೊಂದು ದುಡ್ಡನ್ನು ಪಡೆದು ಕಳಪೆ ಗುಣಮಟ್ಟದ ಆಹಾರ ನೀಡುವುದನ್ನು ನೆಟ್ಟಿಗರು ಟೀಕಿಸಿದ್ದಾರೆ.
https://twitter.com/DrSarvapriya/status/1612138351683067906?ref_src=twsrc%5Etfw%7Ctwcamp%5Etweetembed%7Ctwterm%5E1612138351683067906%7Ctwgr%5Ea787e713c89d1d0fbf81b0afd7ee079648111141%7Ctwcon%5Es1_&ref_url=https%3A%2F%2Fwww.indiatoday.in%2Findia%2Fstory%2Funacceptable-passenger-finds-stone-in-air-india-in-flight-meal-airline-takes-note-2319981-2023-01-11