SHOCKING : ಸಾಲಭಾದೆ ತಾಳಲಾರದೇ 4 ವರ್ಷದ ಮಗನಿಗೆ ವಿಷಪ್ರಾಶನ ಮಾಡಿ ಉದ್ಯಮಿ ದಂಪತಿ ಆತ್ಮಹತ್ಯೆ.!

ಉತ್ತರ ಪ್ರದೇಶದ ಶಹಜಹಾನ್ಪುರದಲ್ಲಿ ದಂಪತಿಗಳು ತಮ್ಮ 4 ವರ್ಷದ ಮಗನಿಗೆ ವಿಷಪ್ರಾಶನ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಆರ್ಥಿಕ ಸಾಲದ ಬಾಧೆಯಿಂದ ದಂಪತಿಗಳು ಮನನೊಂದಿದ್ದರು ಎನ್ನಲಾಗಿದೆ.

ಬುಧವಾರ ಬೆಳಿಗ್ಗೆ ಪ್ರತ್ಯೇಕ ಕೋಣೆಗಳಲ್ಲಿ ಸಂಬಂಧಿಕರು ಮೂವರ ಶವಗಳನ್ನು ಪತ್ತೆ ಮಾಡಿದ್ದಾರೆ. ಪೊಲೀಸರ ಪ್ರಕಾರ, ಕೈಮಗ್ಗ ಉದ್ಯಮಿ ಸಚಿನ್ ಗ್ರೋವರ್ (30) ಮತ್ತು ಅವರ ಪತ್ನಿ ಶಿವಾನಿ (28) ಸಾಲದ ಸುಳಿಯಲ್ಲಿದ್ದರು. ಸ್ಥಳದಿಂದ ಡೆತ್ ನೋಟ್ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಸಚಿನ್ ಹೆಚ್ಚುತ್ತಿರುವ ಸಾಲ ಮತ್ತು ಆದಾಯದ ಕೊರತೆಯಿಂದ ತೀವ್ರ ನೊಂದಿರುವುದಾಗಿ ಬರೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನನ್ನ ಕುಟುಂಬದ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ, ಅವರೆಲ್ಲರೂ ನನ್ನನ್ನು ಬೆಂಬಲಿಸಿದರು. ದಯವಿಟ್ಟು ನಮ್ಮ ಸಾಲವನ್ನು ತೀರಿಸಲು ನಮ್ಮ ಕಾರು ಮತ್ತು ಮನೆಯನ್ನು ಮಾರಾಟ ಮಾಡಿ, ಇದರಿಂದ ನಮ್ಮ ಸಾಲವು ತೀರಿಸಿ ಎಂದು ಸಚಿನ್ ಆತ್ಮಹತ್ಯೆ ಪತ್ರದಲ್ಲಿ ಬರೆದಿದ್ದಾರೆ. “ಮಂಗಳವಾರ ರಾತ್ರಿ ದಂಪತಿಗಳು ಸೀಲಿಂಗ್ ಫ್ಯಾನ್ಗಳಿಗೆ ನೇಣು ಬಿಗಿದುಕೊಂಡರು, ಆದರೆ ಮಗುವಿನ ಶವವು ಮತ್ತೊಂದು ಕೋಣೆಯಲ್ಲಿ ಪತ್ತೆಯಾಗಿದೆ. ಪ್ರಾಥಮಿಕವಾಗಿ, ಪೋಷಕರು ಮೊದಲು ತಮ್ಮ ಮಗನಿಗೆ ವಿಷಪ್ರಾಶನ ಮಾಡಿ ನಂತರ ಇಬ್ಬರು ನೇಣಿಗೆ ಶರಣಾಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read