BIG NEWS: ‘ಇಂಡಿಯಾ’ ಬದಲು ‘ಭಾರತ’ ಎಂದು ಬದಲಾವಣೆ ಬಗ್ಗೆ ವಿಶ್ವಸಂಸ್ಥೆ ಮಹತ್ವದ ಮಾಹಿತಿ

ವಿಶ್ವಸಂಸ್ಥೆ: ‘ಇಂಡಿಯಾ’ದ ಹೆಸರನ್ನು ಔಪಚಾರಿಕವಾಗಿ ‘ಭಾರತ್’ ಎಂದು ಬದಲಾಯಿಸಲು ವಿನಂತಿಸಿದರೆ, ವಿಶ್ವಸಂಸ್ಥೆಯು ಅದನ್ನು ಪರಿಗಣಿಸುತ್ತದೆ ಎಂದು ವಿಶ್ವಸಂಸ್ಥೆಯ ವಕ್ತಾರರು ಬುಧವಾರ ಹೇಳಿದ್ದಾರೆ.

ಟರ್ಕಿಯ(Turkey) ಹೆಸರನ್ನು ಟರ್ಕಿಯೆ(Turkiye) ಎಂದು ಬದಲಾಯಿಸಿದ್ದು, ಟರ್ಕಿಯಂತೆಯೇ ಭಾರತವು ವಿನಂತಿಸಿದರೆ ಹೆಸರನ್ನು ಬದಲಾಯಿಸಲಾಗುವುದು ಎಂದು ಹೇಳಿದ್ದಾರೆ.

ಭಾರತ ಹೆಸರು ಬದಲಾವಣೆ ಬಗ್ಗೆ ನಿಮ್ಮ ಪ್ರಕ್ರಿಯೆ ಏನು ಎಂದು ಚೀನಾದ ಮಾಧ್ಯಮ ವರದಿಗಾರರ ಪ್ರಶ್ನೆಗೆ ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರಸ್ ಅವರ ಉಪ ವಕ್ತಾರ ಫರ್ಹಾನ್ ಹಕ್, ಟರ್ಕಿಯೇ, ಸರ್ಕಾರವು ನಮಗೆ ನೀಡಿದ ಔಪಚಾರಿಕ ಮನವಿಗೆ ನಾವು ಪ್ರತಿಕ್ರಿಯಿಸಿದ್ದೇವೆ. ನಿಸ್ಸಂಶಯವಾಗಿ, ನಾವು ಅಂತಹ ವಿನಂತಿಗಳನ್ನು ಭಾರತದಿಂದ ಅದರ ಹೆಸರನ್ನು ಬದಲಾಯಿಸಲು ಪಡೆದರೆ ಅದನ್ನು ಸಹ ಪರಿಗಣಿಸುತ್ತೇವೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಿ20 ಶೃಂಗಸಭೆಯಲ್ಲಿ ಭಾಗವಹಿಸುವ ನಾಯಕರಿಗೆ ಇಂಗ್ಲಿಷ್‌ ನಲ್ಲಿ ಪ್ರೆಸಿಡೆಂಟ್ ಆಫ್ ಭಾರತ್ ಎಂಬ ಶೀರ್ಷಿಕೆಯೊಂದಿಗೆ ಕಳುಹಿಸಲಾದ ಔತಣಕೂಟದ ಆಹ್ವಾನ ಪತ್ರಿಕೆ ಇಂಡಿಯಾ ಎಂಬ ಹೆಸರನ್ನು ಕೈಬಿಡಲಿದೆ ಎಂಬ ಊಹಾಪೋಹ ಹುಟ್ಟುಹಾಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read