BIG NEWS: ಜಾತ್ರೆಗೆ ಬಂದಿದ್ದಾಗ ದುರಂತ: ನದಿಯಲ್ಲಿ ಮುಳುಗಿ ಯುವಕ ಸಾವು

ದಾವಣಗೆರೆ: ಉಕ್ಕಡಗಾತ್ರಿ ಕರಿ ಬಸವೇಶ್ವರ ಜಾತ್ರಾ ರಥೋತ್ಸವಕ್ಕೆಂದು ಬಂದಿದ್ದ ಯುವಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ಹರಿಹರ ಆಲೂಕಿನ ಉಕ್ಕಡಗಾತ್ರಿಯಲ್ಲಿ ನಡೆದಿದೆ.

ಹಿರೆಕೇರೂರು ತಾಲೂಕಿನ ಹದರಿಹಳ್ಳಿ ನಾಗರಾಜ್ (26) ಮೃತ ಯುವಕ. ಕುಟುಂಬದವರ ಜೊತೆ ಯುವಕ ಉಕ್ಕಡಗಾತ್ರಿ ಜಾತ್ರೆಗೆ ಬಂದಿದ್ದ. ಈ ವೇಳೆ ತುಂಗಭದ್ರಾ ನದಿಯಲ್ಲಿ ಸ್ನಾನಕ್ಕೆಂದು ಇಳಿದಿದ್ದಾನೆ.

ನೀರಿನ ಸೆಳೆತಕ್ಕೆ ಸಿಲುಕಿದ ಯುವಕ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಮಲೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read