Video | ಇಳಿ ವಯಸ್ಸಿನ ಅಜ್ಜಿ ಆಸೆ ಈಡೇರಿಸಿದ ವೈದ್ಯನಿಗೆ ಶ್ಲಾಘನೆಗಳ ಮಹಾಪೂರ

ಇಂಗ್ಲೆಂಡ್‌ ಮೂಲದ ದಂತವೈದ್ಯರಾದ ಡಾ. ಉಸಾಮಾ ಅಹ್ಮದ್ ಅವರು ತಮ್ಮ ಅಜ್ಜಿಯನ್ನು ಪ್ಯಾರಿಸ್‌ಗೆ ಪ್ರವಾಸಕ್ಕೆ ಕರೆದೊಯ್ಯಲು ನಿರ್ಧರಿಸಿದ್ದು ಇದು ಇಂಟರ್ನೆಟ್‌ನಲ್ಲಿ ಹೃದಯ ಗೆದ್ದಿದೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಡಾ ಅಹ್ಮದ್ ತಮ್ಮ ಅಜ್ಜಿಗೆ ಏನಾದರೂ ಒಳ್ಳೆಯದು ಮಾಡಬೇಕು ಎನ್ನುವ ಕಾರಣಕ್ಕೆ ಅವರ ಆಸೆಯನ್ನು ಈಡೇರಿಸಿದ್ದಾರೆ.

ಹೋಟೆಲ್ ಕೊಠಡಿಯ ಕಿಟಕಿಯಿಂದ ಹೊರಗೆ ನೋಡುತ್ತಿರುವ ಅಜ್ಜಿಯ ಚಿತ್ರವನ್ನು ಡಾ ಅಹ್ಮದ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೊದಲ್ಲಿ, ಅವರು ಪ್ಯಾರಿಸ್ ಬೀದಿಗಳನ್ನು ಅನ್ವೇಷಿಸುತ್ತಿರುವುದನ್ನು ಮತ್ತು ತನ್ನ ಕುಟುಂಬದೊಂದಿಗೆ ಶಾಪಿಂಗ್ ವಿನೋದಕ್ಕೆ ಹೋಗುತ್ತಿರುವುದನ್ನು ಕಾಣಬಹುದು. ಅವರು ಅನೇಕ ಫೋಟೋಗಳಿಗೆ ಪೋಸ್ ನೀಡುವುದನ್ನು ಸಹ ಕಾಣಬಹುದು.

ಡಾ ಅಹ್ಮದ್ ಮತ್ತು ಅವರ ಅಜ್ಜಿಯ ನಡುವಿನ ಬಾಂಧವ್ಯವನ್ನು ಇಂಟರ್ನೆಟ್ ಇಷ್ಟಪಟ್ಟಿದೆ. ನೀವು ಅಜ್ಜಿಯೊಂದಿಗೆ ನಿಮ್ಮ ಕನಸುಗಳನ್ನು ಪೂರೈಸುವ ಅದೃಷ್ಟ ಹೊಂದಿದ್ದೀರಿ. ಇದು ನಿಜವಾಗಿಯೂ ಶ್ಲಾಘನಾರ್ಹ ಎಂದು ಹಲವರು ಬರೆದಿದ್ದರೆ, ಈ ವಯಸ್ಸಿನಲ್ಲಿ ಅಜ್ಜಿಯ ಆಸೆ ಈಡೇರಿಸುತ್ತಿರುವ ನೀವೇ ಗ್ರೇಟ್‌ ಎಂದು ಹಲವರು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read