ಚೈನೀಸ್ ಮಾಂಜಾದಿಂದ ಮತ್ತೊಂದು ದುರಂತ; ಗಂಭೀರ ಗಾಯಗೊಂಡ ಯುವಕ

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಚೈನೀಸ್ ಮಂಜಾ ಕತ್ತರಿಸಿ ಒಬ್ಬ ಯುವಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಫಜಲ್‌ಪುರ ನಿವಾಸಿಯಾದ 21 ವರ್ಷದ ಮೊಹಮ್ಮದ್ ಇರ್ಷಾದ್ ಈ ಘಟನೆಯಲ್ಲಿ ಗಾಯಗೊಂಡವರು. ದಂತ ಕ್ಲಿನಿಕ್‌ನಲ್ಲಿ ಕಂಪೌಂಡರ್ ಆಗಿ ಕೆಲಸ ಮಾಡುವ ಇವರು ಶುಕ್ರವಾರ ಸಂಜೆ ತಮ್ಮ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಧಾಂಚಾ ಭವನದ ಬಳಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ.

ಈ ವೇಳೆ ಮಾಂಜಾ ಇವರ ಕುತ್ತಿಗೆಗೆ ಸುತ್ತಿಕೊಂಡು ಆಳವಾದ ಗಾಯ ಮಾಡಿದ್ದು ಇದರಿಂದಾಗಿ ರಕ್ತಸ್ರಾವವಾಗುತ್ತಿದ್ದ ಅವರನ್ನು ಸ್ನೇಹಿತ ಸದಾವನ್ ಚರಕ್ ಆಸ್ಪತ್ರೆಗೆ ಕರೆದೊಯ್ದರು. ಇರ್ಷಾದ್‌ಗೆ ಕುತ್ತಿಗೆಗೆ 20 ಹೊಲಿಗೆ ಹಾಕಲಾಯಿತು. ವೈದ್ಯರು ಇರ್ಷಾದ್ ಅವರು ಅದೃಷ್ಟವಶಾತ್ ಬದುಕುಳಿದರು ಎಂದು ಹೇಳಿದ್ದಾರೆ.

ಮಕರ ಸಂಕ್ರಾಂತಿಯಂದು ಇಂದೋರದಲ್ಲಿ ಇದೇ ರೀತಿಯ ಒಂದು ಘಟನೆ ನಡೆದಿತ್ತು. ಒಬ್ಬ 22 ವರ್ಷದ ಯುವಕ ಹಿಮಾಂಶು ಸೋಲಂಕಿ ಗಾಳಿಪಟದ ಮಾಂಜಾದಿಂದ ಕುತ್ತಿಗೆ ಕತ್ತರಿಸಿ ಸಾವನ್ನಪ್ಪಿದ್ದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read