ಜೂನ್ 13 ರಿಂದ 17ರವರೆಗೆ ಯುಜಿಸಿ ಎನ್ಇಟಿ ಪರೀಕ್ಷೆ

ನವದೆಹಲಿ: ಪದವಿ ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಅಧ್ಯಾಪಕರು, ಪ್ರಾಧ್ಯಾಪಕರಾಗಲು ನಡೆಸಲಾಗುವ ಅರ್ಹತಾ ಪರೀಕ್ಷೆ ಯುಜಿಸಿ ಎನ್ಇಟಿಗೆ ದಿನಾಂಕ ಪ್ರಕಟಿಸಲಾಗಿದೆ.

ಪ್ರಸಕ್ತ ಸಾಲಿನ ಯುಜಿಸಿ ಎನ್ಎಟಿ ಪರೀಕ್ಷೆ ಜೂನ್ 13 ರಿಂದ 17ರ ವರೆಗೆ ನಡೆಯಲಿದೆ. ಯುಜಿಸಿ ಎನ್ಎಟಿ ಪರೀಕ್ಷೆಯು ಜೂನಿಯರ್ ರೀಸರ್ಚ್ ಫೆಲೋಶಿಪ್ ಕೂಡ ಒಳಗೊಂಡಿದೆ. ಹೆಚ್ಚಿನ ಅಂಕ ಗಳಿಸಿದವರಿಗೆ ಮಾಸಿಕ ವೇತನಸಹಿತ ಸಂಶೋಧನೆ ನಡೆಸಲು ಅವಕಾಶ ನೀಡಲಾಗುವುದು. ಹೀಗಾಗಿ ಈ ಪರೀಕ್ಷೆ ತೆಗೆದುಕೊಳ್ಳುವ ಸ್ನಾತಕೋತ್ತರ ಪದವೀಧರರ ಸಂಖ್ಯೆ ಹೆಚ್ಚಾಗಿರುತ್ತದೆ.

ಅರ್ಜಿ ಮತ್ತು ಪರೀಕ್ಷಾ ಕೇಂದ್ರ ಸೇರಿದಂತೆ ಹೆಚ್ಚಿನ ವಿವರಗಳಿಗಾಗಿ ugcnet.nta.nic.in ವೆಬ್ಸೈಟ್ ಗಮನಿಸಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read