ಪ್ರಶ್ನೆ ಪತ್ರಿಕೆ ಸೋರಿಕೆ ಕಾರಣ ರದ್ದಾಗಿದ್ದ ಯುಜಿಸಿ- ನೆಟ್ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆ: ಕಂಪ್ಯೂಟರ್ ಆಧರಿತ ಎಕ್ಸಾಂಗೆ ನಿರ್ಧಾರ

ನವದೆಹಲಿ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದ ಕಾರಣ ರದ್ದಾಗಿದ್ದ ಯುಜಿಸಿ -ನೆಟ್ ಪರೀಕ್ಷೆಗೆ ಹೊಸ ದಿನಾಂಕ ಘೋಷಿಸಲಾಗಿದೆ.

ಆ. 21ರಿಂದ ಸೆ. 4ರ ನಡುವೆ ಪರೀಕ್ಷೆ ನಡೆಯಲಿದೆ. ಪೆನ್, ಪೇಪರ್ ಮೋಡ್ ಬದಲು ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ ನಿರ್ಧರಿಸಲಾಗಿದೆ. ಈ ಮೊದಲು ಜೂನ್ 18ರಂದು ಎರಡು ಪಾಳಿಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು. ಟೆಲಿಗ್ರಾಂ ಆಪ್ ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಬಯಲಾದ ಕಾರಣ ಜೂನ್ 19ರಂದು ಪರೀಕ್ಷೆ ರದ್ದು ಮಾಡಲಾಗಿತ್ತು.

ನೀಟ್ ಹಾಗೂ ನೆಟ್ ಪರೀಕ್ಷೆಗಳಲ್ಲಿ ಅಕ್ರಮ ಆರೋಪ ಕೇಳಿ ಬಂದ ಬೆನ್ನಲ್ಲೇ ಸಂಸ್ಥೆಯಲ್ಲಿ ಸುಧಾರಣೆ ತರಲು ರಚಿಸಿದ ಇಸ್ರೋ ಮಾಜಿ ಅಧ್ಯಕ್ಷ ರಾಧಾಕೃಷ್ಣನ್ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯು ಸಲಹೆ ನೀಡಲು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಮನವಿ ಮಾಡಿದೆ.

ನೀಟ್ ಅಕ್ರಮದ ಬಳಿಕ ರದ್ದು ಪಡಿಸಿದ್ದ ಯುಜಿಸಿ -ನೆಟ್ ಪರೀಕ್ಷೆಗೆ ಹೊಸ ದಿನಾಂಕ ಘೋಷಣೆಯಾಗಿದ್ದು, ಆಗಸ್ಟ್ 21ರಿಂದ ಸೆಪ್ಟೆಂಬರ್ 4ರ ನಡುವೆ ನಡೆಯಲಿದೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read