ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳಿಗೆ ಭರ್ಜರಿ ಸುದ್ದಿ: UGC JRF, SRF ಸಹಾಯಧನ ಭಾರಿ ಹೆಚ್ಚಳ

ನವದೆಹಲಿ: ವಿವಿಧ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಸಂಶೋಧನಾ ಫೆಲೋಶಿಪ್ ಸಹಾಯವನ್ನು ಹೆಚ್ಚಿಸಲಾಗಿದೆ.

ವಿಶ್ವವಿದ್ಯಾನಿಲಯ ಧನಸಹಾಯ ಆಯೋಗದ(UGC) ಮಾಹಿತಿಯ ಪ್ರಕಾರ, ಫೆಲೋಶಿಪ್ ಮೊತ್ತದಲ್ಲಿನ ಹೆಚ್ಚಳವು ಜನವರಿ 2023 ರಿಂದ ಪೂರ್ವಾನ್ವಯವಾಗಲಿದೆ.

ಜೂನಿಯರ್ ರಿಸರ್ಚ್ ಫೆಲೋಶಿಪ್(JRF) ಅನ್ನು 31,000 ರೂ. ನಿಂದ 37,000 ರೂ.ಗೆ ಏರಿಸಲಾಗಿದೆ ಮತ್ತು ಹಿರಿಯ ಸಂಶೋಧನಾ ಫೆಲೋಶಿಪ್(SRF) ತಿಂಗಳಿಗೆ 35,000 ರೂ.ನಿಂದ 42,000 ರೂ.ಗೆ ಏರಿಸಲಾಗಿದೆ.

ರಿಸರ್ಚ್ ಅಸೋಸಿಯೇಟ್-I ತಿಂಗಳಿಗೆ 57,000 ರೂ.ನಿಂದ 58,000 ರೂ.ಗೆ ಹೆಚ್ಚಿಸಲಾಗಿದೆ. ರಿಸರ್ಚ್ ಅಸೋಸಿಯೇಟ್-II ತಿಂಗಳಿಗೆ 49,000 ರೂ.ನಿಂದ ರೂ 61,000 ರೂ.ಗೆ ಹೆಚ್ಚಳ ಮಾಡಲಾಗಿದೆ.

ಅದೇ ರೀತಿ ರಿಸರ್ಚ್ ಅಸೋಸಿಯೇಟ್-3ಗೆ 13,000 ರೂ. ಹೆಚ್ಚಳವಾಗಲಿದೆ. ಅವರ ಫೆಲೋಶಿಪ್ 54,000 ರೂ. ಬದಲಿಗೆ ತಿಂಗಳಿಗೆ 67,000 ರೂ. ಆಗಿರುತ್ತದೆ.

ಫೆಲೋಶಿಪ್ ಮೊತ್ತವನ್ನು ಹೆಚ್ಚಿಸಲು ಕೇಂದ್ರವು ಹೆಚ್ಚುವರಿ 725 ಕೋಟಿ ರೂ. ನೀಡಿದೆ. ಅಖಿಲ ಭಾರತ ಸಂಶೋಧನಾ ವಿದ್ವಾಂಸ ಸಂಘವು ಸಂಶೋಧನಾ ಫೆಲೋಶಿಪ್‌ನ ಗಾತ್ರವನ್ನು ಹೆಚ್ಚಿಸುವಂತೆ ಒತ್ತಾಯಿಸಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read