BIG NEWS: ಒಂದೆ ಕುಟುಂಬದ ನಾಲ್ವರ ಹತ್ಯೆ ಕೇಸ್; ತಪ್ಪೊಪ್ಪಿಕೊಂಡ ಹಂತಕ ಹೇಳಿದ್ದೇನು?

ಉಡುಪಿ: ಚಾಕುವಿನಿಂದ ಇರಿದು ಒಂದೇ ಕುಟುಂಬದ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗಲೆ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಪೊಲಿಸ್ ವರಿಷ್ಠಾಧಿಕಾರಿ, ಆರೋಪಿ ಪ್ರವೀಣ್ ಚೌಗಲೆಯನ್ನು ನಿನ್ನೆ ಬೆಳಗಾವಿ ಜಿಲ್ಲೆ ಕುಡುಚಿಯಲ್ಲಿ ಬಂಧಿಸಲಾಗಿತ್ತು. ವಿಚಾರಣೆ ವೇಳೆ ಕೊಲೆ ಮಾಡಿದ್ದು ತಾನೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಗೆ ಮೂರ್ನಾಲ್ಕು ಕಾರಣಗಳಿರುವ ಸಾಧ್ಯತೆ ಇದೆ. ಸಂಪೂರ್ಣ ತನಿಖೆ ಮಾಡದೇ ಹತ್ಯೆಗೆ ಕಾರಣ ಹೇಳಲು ಸಾಧ್ಯವಿಲ್ಲ ಎಂದರು.

ಅಯ್ನಾಝ್ ಕೊಲೆ ಮಾಡುವುದೇ ಆರೊಪಿಯ ಉದ್ದೇಶವಾಗಿತ್ತು. ಅಯ್ನಾಝ್ ಕೊಲೆ ಬಳಿಕ ತಪ್ಪಿಸಿಕೊಳ್ಳಲು, ಸಾಕ್ಷ್ಯನಾಶಕ್ಕಾಗಿ ಉಳಿದವರ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ. ತನಿಖೆ ಇನ್ನೂ ಮುಂದುವರೆದಿದೆ ಎಂದು ತಿಳಿಸಿದ್ದಾರೆ.

ನ.12ರಂದು ಉಡುಪಿಯ ಮನೆಯೊಂದರಲ್ಲಿ ತಾಯಿ ಹಾಗೂ ಮೂವರು ಮಕ್ಕಳನ್ನು ಆರೋಪಿ ಪ್ರವೀಣ್ ಚೌಗಲೆ ಬರ್ಬರವಾಗಿ ಹತ್ಯೆ ಮಾಡಿದ್ದ. ಹಸೀನಾ, ಅಫ್ನಾನ್, ಅಯ್ನಾಝ್, ಹಾಸಿಂ ಕೊಲೆಯಾದ ದುರ್ದೈವಿಗಳು. ಕೊಲೆ ಬಳಿಕ ಆರೋಪಿ ಬೆಳಗಾವಿಯ ಕುಡುಚಿಯಲ್ಲಿ ಸಂಬಂಧಿಕರ ಮನೆಯಲ್ಲಿ ಅಡಗಿದ್ದ. ನ.14ರಂದು ಉಡುಪಿ ಪೊಲೀಸರು ಮೊಬೈಲ್ ಲೊಕೇಶನ್ ಆಧಾರದ ಮೇಲೆ ಕುಡುಚಿಯಲ್ಲಿ ಆರೋಪಿಯನ್ನು ಬಂಧಿಸಿದ್ದರು.

ಇನ್ನು ಬಂಧಿತ ಆರೋಪಿ ಮೂರು ತಿಂಗಳು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದ. ಬಳಿಕ ಕೆಲಸಕ್ಕೆ ರಾಜೀನಾಮೆ ನೀಡಿ ಏರ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಕ್ಯಾಬಿನ್ ಕ್ರ್ಯೂ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read