ಮಹಿಳೆ ಹತ್ಯೆಗೈದು ವಿದೇಶಕ್ಕೆ ಹಾರಿದ್ದ ಆರೋಪಿ; 3 ವರ್ಷಗಳ ಬಳಿಕ ಏರ್ ಪೋರ್ಟ್ ನಲ್ಲಿ ಅರೆಸ್ಟ್; ಸಿಕ್ಕಿಬಿದ್ದ ಕಥೆಯೇ ರೋಚಕ

ಉಡುಪಿ: 2021ರಲ್ಲಿ ಉಡುಪಿಯ ಬ್ರಹ್ಮಾರದ ಕುಮ್ರಗೋಡುವಿನ ಮನೆಯಲ್ಲಿ ಮಹಿಳೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಕೇಪ್ ಆಗಿದ್ದ ಓರ್ವ ಆರೋಪಿ ಈಗ ಮೂರು ವರ್ಷಗಳ ಬಳಿಕ ಲಖನೌ ಏರ್ ಪೋರ್ಟ್ ನಲ್ಲಿ ಅರೆಸ್ಟ್ ಆಗಿದ್ದಾನೆ.

ಧರ್ಮೇಂದ್ರ ಕುಮಾರ್ ಸುಹಾನಿ ಬಂಧಿತ ಆರೋಪಿ. 2021ರ ಜುಲೈನಲ್ಲಿ ಬ್ರಹ್ಮಾವರ ತಾಲೂಕಿನ ಕುಮ್ರಗೋಡುವಿನ ಫ್ಲಾಟ್ ನಲ್ಲಿ ವಿಶಾಲ ಗಾಣಿಗ ಎಂಬ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿಗಳಾದ ಮಹಿಳೆಯ ಪತಿ ರಾಮಕೃಷ್ಣ, ಸುಪಾರಿ ಕಿಲ್ಲರ್ ಸ್ವಾಮಿನಾಥನ್ ನಿಶಾದ್ ನನ್ನು ಬಂಧಿಸಲಾಗಿತ್ತು. ಆದರೆ ಕೊಲೆಗೆ ಸಹಕರಿಸಿದ್ದ ಧರ್ಮೇಂದ್ರ ಕುಮಾರ್ ಸುಹಾನಿ ವಿದೇಶಕ್ಕೆ ಹಾರಿ ಎಸ್ಕೇಪ್ ಆಗಿದ್ದ.

ಇದೀಗ ಮೂರು ವರ್ಷದ ಬಳಿಕ ಲಖನೌ ವಿಮಾನ ನಿಲ್ದಾಣದಲ್ಲಿ ಧರ್ಮೇಂದ್ರ ಕುಮಾರ್ ಸುಹಾನಿ ಪತ್ತೆಯಾಗಿದ್ದಾನೆ.

ಬ್ರಹ್ಮಾವರ ಎಎಸ್ಐ ಶಾಂತರಾಜ ಹಾಗೂ ಕಾನ್ಸ್ ಟೇಬಲ್ ಸುರೇಶ್ ಬಾಬು ಲಖನೌಗೆ ತೆರಳಿದ್ದಾಗ ಏರ್ ಪೋರ್ಟ್ ನಲ್ಲಿ ಕೊಲೆ ಆರೋಪಿ ಧರ್ಮೇಂದ್ರ ಕುಮಾರ್ ಕಣ್ಣಿಗೆ ಬಿದ್ದಿದ್ದಾನೆ. ತಕ್ಷಣ ಅಲರ್ಟ್ ಆದ ಪೊಲೀಸರು ಆರೋಪಿಯನ್ನು ಬಂಧಿಸಿ ಕರೆತಂದಿದ್ದಾರೆ. ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ತನಿಖೆ ಮುಂದುವರೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read