ಕಾಪುವಿನ ಮಾರಿಗುಡಿಗೆ ಭೇಟಿ ನೀಡಿದ ಟೀಂ ಇಂಡಿಯಾ ಆಟಗಾರ ಸೂರ್ಯ ಕುಮಾರ್

ಉಡುಪಿ: ಟೀಂ ಇಂಡಿಯಾ ಆಟಗಾರ ಸೂರ್ಯ ಕುಮಾರ್, ಪತ್ನಿ ದೇವಿಶಾ ಶೆಟ್ಟಿ ಜೊತೆ ಉಡುಪಿಗೆ ಆಗಮಿಸಿದ್ದು, ಕಾಪುವಿನ ಶ್ರೀ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಕಾಪುವಿನ ಶ್ರೀ ಮಾರಿಗುಡಿಗೆ ಭೇಟಿ ನೀಡಿದ ಸೂರ್ಯ ಕುಮಾರ್-ದೇವಿಶಾ ಶೆಟ್ಟಿ ದಂಪತಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಡಿದ ದೇವಿಶಾ ಶೆಟ್ಟಿ, ಐದು ವರ್ಷಗಳ ಹಿಂದೆ ಉಡಿಪಿಗೆ ಬಂದಿದ್ದೆವು. ಕಾಪು ಅಮ್ಮನ ಗುಡಿಗೆ ಭೇಟಿ ನೀಡಬೇಕು ಎಂಬ ಇಚ್ಛೆ ಇತ್ತು. ಈಗ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದು ಖುಷಿ ತಂದಿದೆ ಎಂದರು.

ಯಾವುದೇ ಟೂರ್ನಿ ಇಲ್ಲದಿದ್ದರೆ ದೇಗುಲದ ಜೀರ್ಣೋಧ್ಧಾರ ಕಾರ್ಯಕ್ರಮಕ್ಕೆ ಆಗಮಿಸುತ್ತೇವೆ ಎಂದರು. ಇದೇ ವೇಳೆ ಭಾರತವನ್ನು ಪ್ರತಿನಿಧಿಸಬೇಕು. ವರ್ಲ್ಡ್ ಕಪ್ ಗೆಲ್ಲಬೇಕು ಎಂಬುದು ಎಲ್ಲಾ ಕ್ರಿಕೆಟಿಗರ ಕನಸು. ಅದರಂತೆ ಈ ಕನಸು ನನಸಾಗಿದೆ ಎಂದು ಸಂತಸ ಹಂಚಿಕೊಂಡರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read