ಉಡುಪಿ: ತಂದೆಯೊಬ್ಬ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದು, ಆತನನ್ನು ರಕ್ಷಿಸಲು ಬಾವಿಗಿಳಿದ ಮಗನೂ ಸಾವನ್ನಪ್ಪಿರುವ ದಾರುಣ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತೆಕ್ಕಟ್ಟೆಯಲ್ಲಿ ನಡೆದಿದೆ.
ಮಾದವ ದೇವಾಡಿಗ (55) ಹಾಗೂ ಮಗ ಪ್ರಸಾದ್ ದೇವಾಡಿಗ (22) ಮೃತ ದುರ್ದೈವಿಗಳು. ಪತಿ ಬಾವಿಗೆ ಹಾರುತ್ತಿದ್ದಂತೆ ಪತ್ನಿ ಕೂಡ ಬಾವಿಗೆ ಹಾರಿದ್ದರು. ಸದ್ಯ ಅವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮಾದವ ದೇವಾಡಿಗ ಕುಟುಂಬ ಕುಂದಾಪುರದ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇದ್ದಕ್ಕಿದ್ದಂತೆ ಮಾದವ ದೇವಾಡಿಗ ಇಂದು ಬಾವಿಗೆ ಹಾರಿದ್ದಾರೆ. ತಂದೆ ಬಾವಿಗೆ ಹಾರುತ್ತಿದ್ದಂತೆ ಅವರನ್ನು ರಕ್ಷಿಸಲೆಂದು ಮಗ ಬಾವಿಗಿಳಿದಿದ್ದಾರೆ. ಆದರೆ ಇಬ್ಬರೂ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.