ಬೆಂಗಳೂರು: ಸ್ಪೀಕರ್ ಯು.ಟಿ.ಖಾದರ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರ ತಕ್ಷಣ ತನಿಖೆಗೆ ಆದೇಶಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಕಾಗೇರಿ, ವಿಧಾನಸಭೆಯಲ್ಲಿ ಪ್ರಧಾನ ಬಾಗಿಲಿಗೆ ಮರದ ಕೆತ್ತನೆಯನ್ನು ಮಾಡಿಸಿದರು. ಇದರಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಶಾಸಕರ ಭವನದಲ್ಲಿ ಹಾಸಿಗೆ, ದಿಂಬು ಇತರೆ ವಸ್ತುಗಳನ್ನು ಖರೀದಿಸಲು ಸೂಚಿಸಿದರು. ಖರೀದಿಯಲ್ಲಿಯೂ ಭ್ರಷ್ಟಾಚಾರ ನಡೆದಿದೆ. ಇದಕ್ಕಾಗಿ ಕೋಟ್ಯಂತರ ರೂಪಾಯಿ ದುಂದುವೆಚ್ಚ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.
ವಿಧಾನಸಭೆಯಲ್ಲಿ ಬಾಗಿಲು ಕೆತ್ತನೆ, ಶಾಸಕರ ಭವನದಲ್ಲಿ ಹಾಸಿಗೆ ದಿಂಬು ಖರೀದಿ, ರಿಪೇರಿ ಕೆಲಸ ಸೇರಿದಂತೆ ಹಲವು ಕಾರ್ಯಗಳಿಗೆ ತಮಗೆ ಬೇಕಾದವರಿಗೆ ಟೆಂಡರ್ ಕೊಟ್ಟಿದಾರೆ. ಪುಸ್ತಕ ಮೇಳಕ್ಕೆ 4.5 ಕೋಟಿ ವೆಚ್ಚ ಮಾಡಿಸಿದ್ದಾರೆ. ಸ್ಪೀಕರ್ ಖಾದರ್ ಈ ರೀತಿ ಮಾಡುವ ಅವಶ್ಯಕತೆ ಇತ್ತಾ? ಇರಲಿಲ್ಲ. ಸ್ಪೀಕರ್ ವಿರುದ್ಧ ಭಾರಿ ಭ್ರಷ್ಟಾಚಾರ ಆರೋಪಗಳಿವೆ ಮೊದಲು ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
