ನಿನ್ನೆ ನಡೆದ ಪ್ರೊ ಕಬ್ಬಡಿಯ 2ನೇ ಪಂದ್ಯ ರೋಚಕತೆಯಿಂದ ಸಾಗಿದ್ದು, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಆರಂಭದಲ್ಲಿ ಲೀಡ್ ಪಡೆದುಕೊಂಡಿದ್ದ ಯು ಮುಂಬಾ ತಂಡ ಸುಲಭವಾಗಿ ಜಯ ಕಾಣುವ ಲೆಕ್ಕಾಚಾರದಲ್ಲಿತ್ತು.
ಕೆಲವೇ ನಿಮಿಷಗಳಲ್ಲಿ ಬೆಂಗಳೂರು ಬುಲ್ಸ್ ಅತಿ ವೇಗವಾಗಿ ಪಾಯಿಂಟ್ಸ್ ಗಳನ್ನು ಪಡೆದುಕೊಳ್ಳುವ ಮೂಲಕ ಕಮ್ ಬ್ಯಾಕ್ ಮಾಡಿದ್ದು, ಕೊನೆಯ ಹಂತದಲ್ಲಿ ಕೇವಲ ಎರಡೇ ಪಾಯಿಂಟ್ ಅಂತರದಿಂದ ಯು ಮುಂಬಾ ಜಯಭೇರಿ ಕಂಡಿದೆ.
ಬೆಂಗಳೂರು ಬುಲ್ಸ್ ತಂಡಕ್ಕೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಮತ್ತೊಂದು ಆಘಾತವಾಗಿದೆ. ಈ ಮೂಲಕ ತನ್ನ ಸೆಮಿಫೈನಲ್ ಕನಸನ್ನು ನುಚ್ಚುನೂರು ಮಾಡಿಕೊಂಡಿದೆ. ರೈಡರ್ಗಳ ಕೊರತೆ ಎದ್ದು ಕಾಣುತ್ತಿದ್ದು, ಬೆಂಗಳೂರು ಬುಲ್ಸ್ ಈ ಬಾರಿಯೂ ಒಳ್ಳೆಯ ತಂಡವನ್ನು ರಚನೆ ಮಾಡುವಲ್ಲಿ ವಿಫಲವಾಗಿದೆ.