ಬೆಂಗಳೂರು : ‘ಡಿಜಿಟಲ್ ಅರೆಸ್ಟ್’ ಹೆಸರಿನಲ್ಲಿ ಬೆಂಗಳೂರಿನ ಮಹಿಳೆಯರಿಗೆ ವಂಚನೆ ಎಸಗಿದ ಘಟನೆ ನಡೆದಿದೆ. ಕಿಡಿಗೇಡಿಗಳು ವಿಡಿಯೋ ಕಾಲ್ ನಲ್ಲಿ ಬೆತ್ತಲೆಗೊಳಿಸಿ ಸಾವಿರಾರು ಹಣ ಸುಲಿಗೆ ಮಾಡಿದ್ದಾರೆ.
ಸೈಬರ್ ಅಪರಾಧಿಗಳು , ಮುಂಬೈ ಪೊಲೀಸ್ ಅಧಿಕಾರಿಗಳಂತೆ ನಟಿಸಿ ಅವರನ್ನು ಬೆದರಿಸಿ ದೌರ್ಜನ್ಯ ಎಸಗಿದ್ದಾರೆ. ದೈಹಿಕ ತಪಾಸಣೆ ಹೆಸರಿನಲ್ಲಿ ಮಹಿಳೆಯರ ಬಟ್ಟೆ ಬಿಚ್ಚಿಸಿ 9 ಗಂಟೆ ಕಿರುಕುಳ ನೀಡಿ ಹಣ ವಸೂಲಿ ಮಾಡಿದ್ದಾರೆ. ಜುಲೈ 17 , 20225 ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ವಂಚನೆ ನಡೆದಿದ್ದು ಹೇಗೆ..?
ಮಹಿಳೆಯರಿಗೆ ಕರೆ ಮಾಡಿದ ಆರೋಪಿಗಳು ನೀವು ಜೆಟ್ ಏರ್ ವೇಸ್ ಹಗರಣದಲ್ಲಿ ಭಾಗಿಯಾಗಿದ್ದೀರಿ ಮತ್ತು ಹಣ ವರ್ಗಾವಣೆ , ಮಾನವ ಕಳ್ಳಸಾಗಣೆ ಮತ್ತು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದೀರಿ.. ಎಂದು ಬೆದರಿಕೆ ಹಾಕಿದ್ದಾರೆ. ಮತ್ತು ಮಹಿಳೆಯರ ಆಧಾರ್ ವಿವರ ಉಲ್ಲೇಖಿಸಿ ನಿಮ್ಮನ್ನು ಬಂಧಿಸುತ್ತೀವಿ ಎಂದು ಬೆದರಿಕೆಯೊಡ್ಡಿದ್ದಾರೆ. ಹಾಗೂ ವಿವಿಧ ತಂತ್ರ ಬಳಸಿ ಮಹಿಳೆಯೊಬ್ಬರ ಖಾತೆಯಿಂದ ಸುಮಾರು 58,000 ಸಾವಿರ ಹಣ ಎಗರಿಸಿದ್ದಾರೆ. ನಂತರ ಪರೀಕ್ಷೆಯ ನೆಪದಲ್ಲಿ ವಾಟ್ಸಾಪ್ ವಿಡಿಯೋ ಕರೆಯಲ್ಲಿ ಬೆತ್ತಲೆಗೊಳಿಸುವಂತೆ ಒತ್ತಾಯಿಸಿದ್ದಾರೆ. ಸುಮಾರು 9 ಗಂಟೆ ಇಬ್ಬರ ಮೇಲೆ ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ದೌರ್ಜನ್ಯ ಎಸಗಿದ್ದಾರೆ.ನಂತರ ಮಹಿಳೆಯರಿಗೆ ಇದು ವಂಚನೆ ಎಂದು ಅರಿವಾಗಿದ್ದು, ಶಿವಾಜಿನಗರ ಸಿಇಎನ್ ಅಪರಾಧ ವಿಭಾಗದಲ್ಲಿ ದೂರು ದಾಖಲಿಸಿದರು.