ಸಂಚಾರಿ ಪ್ರಯೋಗಾಲಯ ಕಾರ್ಯಾರಂಭ: ಕಾಮಗಾರಿಗಳ ಗುಣಮಟ್ಟ ಸ್ಥಳದಲ್ಲೇ ಪರಿಶೀಲನೆಗೆ ದಿಟ್ಟ ಕ್ರಮ

ಬೆಂಗಳೂರು: ಬೆಂಗಳೂರಿನಲ್ಲಿ 2 ಸಂಚಾರಿ ಪ್ರಯೋಗಾಲಯ ಕಾರ್ಯಾರಂಭ ಮಾಡಿದ್ದು, ಕಾಮಗಾರಿಗಳ ಗುಣಮಟ್ಟ ಸ್ಥಳದಲ್ಲೇ ಪರಿಶೀಲನೆಗೆ ದಿಟ್ಟ ಕ್ರಮ ಕೈಗೊಳ್ಳಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಎರಡು ವಾಹನಗಳಿಗೆ 38.50 ಲಕ್ಷ ರೂ. ವ್ಯಯ ಮಾಡಲಾಗಿದ್ದು, ತಲಾ 11.40 ಲಕ್ಷ ರೂ. ಮೊತ್ತದ ಪರೀಕ್ಷಾ ಉಪಕರಣಗಳನ್ನು ಅಳವಡಿಸಲಾಗಿದೆ.

ಒಂದು ಸಂಚಾರಿ ಪ್ರಯೋಗಾಲಯದ ವಾಹನದಲ್ಲಿ ಚಾಲಕ ಲ್ಯಾಬ್ ಟೆಕ್ನಿಷಿಯನ್ ಲ್ಯಾಬ್ ಸಹಾಯಕ ಸೇರಿ ಮೂರು ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಬಿಟುಮಿನ್ ಮಾದರಿ ಕಾಬುಲ್ ಸ್ಟೋನ್ ಕಬ್ಬಿಣ ಅಗ್ರಿಗೇಟ್ಸ್ ಕಾಂಕ್ರೀಟ್ ಮಾದರಿ ತಾಪಮಾನ ಪರಿಶೀಲಿಸುವ ಉಪಕರಣ ಕೋರ್ ಕಟ್ಟಿಂಗ್ ಯಂತ್ರ ತೂಕ ಮಾಡುವ ಯಂತ್ರ ಸೇರಿದಂತೆ 16 ಉಪಕರಣಗಳು ಇವೆ. ಎರಡೂ ವಾಹನಗಳು ಗುಣ ನಿಯಂತ್ರಣ ವಿಭಾಗದಿಂದ ಕಾರ್ಯಾಚರಣೆ ಮಾಡಲಿದ್ದು ಎಂಟೂ ವಲಯಗಳಲ್ಲಿ ಕಾಮಗಾರಿ ಗುಣಮಟ್ಟ ಪರೀಕ್ಷಿಸಲಾಗುತ್ತದೆ. ಸಂಚಾರಿ ಪ್ರಯೋಗಾಲಯದ ವಾಹನಗಳ ಸುರಕ್ಷತೆಯ ಹಿತದೃಷ್ಟಿಯಿಂದ ಅಗ್ನಿನಂದಕ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ ಎಂದು ಗುಣ ನಿಯಂತ್ರಣ ವಿಭಾಗದ ಮುಖ್ಯ ಎಂಜಿನಿಯರ್‌ ರಾಘವೇಂದ್ರ ಪ್ರಸಾದ್‌ ತಿಳಿಸಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read