ರಾಯಚೂರು: ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣ ಹೊರ ವಲಯದಲ್ಲಿ ಈಜಲು ಹೋಗಿದ್ದ ಇಬ್ಬರು ನೀರುಪಾಲಾಗಿದ್ದಾರೆ. ಮುದಗಲ್ ಪಟ್ಟಣದ ವೆಂಕಟೇಶ(28), ಯಲ್ಲಾಲಿಂಗ(28) ಮೃತಪಟ್ಟವರು ಎಂದು ಹೇಳಲಾಗಿದೆ.
ಮುದುಗಲ್ ನಿಂದ ಮಸ್ಕಿಗೆ ‘ಕಾಂತಾರ ಚಾಪ್ಟರ್ 1’ ಸಿನಿಮಾ ನೋಡಲು ಬಂದಿದ್ದರು. ಮಧ್ಯಾಹ್ನದ ಪ್ರದರ್ಶನಕ್ಕೆ ಟಿಕೆಟ್ ಸಿಗದ ಕಾರಣ ನಾಲೆಯಲ್ಲಿ ಈಜಲು ಹೋಗಿದ್ದರು. ಈಜಾಡಿದ ನಂತರ ಸಂಜೆ ಸಿನಿಮಾ ನೋಡಲು ಪ್ಲ್ಯಾನ್ ಮಾಡಿಕೊಂಡಿದ್ದು, ಈಜು ಬಾರದಿದ್ದ ಕಾರಣ ನಾಲೆಯಲ್ಲಿ ಯಲ್ಲಾಲಿಂಗ ಕೊಚ್ಚಿ ಹೋಗಿದ್ದಾನೆ. ಆತನ ರಕ್ಷಣೆ ಮಾಡಲು ಹೋಗಿ ವೆಂಕಟೇಶನೂ ನೀರು ಪಾಲಾಗಿದ್ದಾನೆ. ಸಿರವಾರ ಬಳಿ ವೆಂಕಟೇಶ, ಯಲ್ಲಾಲಿಂಗ ಶವಗಳು ಪತ್ತೆಯಾಗಿವೆ. ರಾಯಚೂರು ಜಿಲ್ಲೆ ಮಸ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You Might Also Like
TAGGED:ಕಾಂತಾರ