ಅಮ್ಮನಿಗೆ ನಿತ್ಯ ಹೊಡೆಯುತ್ತಾನೆ; ಅಪ್ಪನ ವಿರುದ್ದ ದೂರು ನೀಡಲು ಠಾಣೆಗೆ ಬಂದ ಪುಟ್ಟ ಮಕ್ಕಳು

ಗ್ವಾಲಿಯರ್ (ಮಧ್ಯಪ್ರದೇಶ): ಗ್ವಾಲಿಯರ್‌ನ ಭಿತರ್‌ವಾರ್ ಪಟ್ಟಣದಲ್ಲಿ ತಮ್ಮ ತಾಯಿಯನ್ನು ಆಗಾಗ್ಗೆ ಹೊಡೆಯುತ್ತಿದ್ದ ತಂದೆಯನ್ನು ಬಂಧಿಸುವಂತೆ ಇಬ್ಬರು ಪುಟಾಣಿಗಳು ಪೊಲೀಸ್ ಠಾಣೆಗೆ ಬಂದು ಪೊಲೀಸರನ್ನು ಕೇಳಿಕೊಂಡಿದ್ದಾರೆ.

8 ಮತ್ತು 9 ವರ್ಷದ ಬಾಲಕಿಯರು ತಮ್ಮ ತಂದೆ, ತಾಯಿಗೆ ಪ್ರತಿನಿತ್ಯ ಥಳಿಸುತ್ತಿದ್ದು, ಈಗ ಆಕೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ದೂರಿದ್ದಾರೆ. ಸ್ಟೇಷನ್ ಹೌಸ್ ಆಫೀಸರ್ ಪ್ರಶಾಂತ್ ಶರ್ಮಾ ಮಕ್ಕಳ ಸಮಸ್ಯೆಗಳನ್ನು ವಿವರವಾಗಿ ಆಲಿಸಿದರು.

ನಂತರ ಅವರ ಮನೆಗೆ ಕರೆದೊಯ್ದು ಪೋಷಕರಿಗೆ ಬುದ್ಧಿ ಹೇಳಿದ್ದಾರೆ. ಬಳಿಕ ಪಾಲಕರು ಜಗಳ ಮಾಡಿಕೊಳ್ಳುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

ಈ ಬಾಲಕಿಯರ ತಾಯಿ ಗೃಹಿಣಿಯಾಗಿದ್ದು, ತಂದೆ ರೈತ ಎಂದು ತಿಳಿದು ಬಂದಿದೆ. ಇಂತಹ ವಾತಾವರಣದಿಂದ ವಿದ್ಯಾಭ್ಯಾಸದತ್ತ ಗಮನ ಹರಿಸುವುದು ಕಷ್ಟವಾಗಿದೆ ಎಂದು ಈ ಬಾಲಕಿಯರು ದೂರಿದ್ದಾರೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read