ಬರೋಬ್ಬರಿ 51 ಲಕ್ಷ ರೂ.ಗೆ ಮಾರಾಟವಾದ ‘ಅಲ್ಲಾ’ ಮಾರ್ಕ್ ಹೊಂದಿದ ಎರಡು ಮೇಕೆಗಳು

ಲಕ್ನೋ: ಅರೇಬಿಕ್ ಭಾಷೆಯಲ್ಲಿ ‘ಅಲ್ಲಾ’ ಎಂದು ಹೋಲುವ ಎರಡು ಮೇಕೆಗಳು ಬಕ್ರಿದ್ ಹಬ್ಬಕ್ಕೂ ಮುನ್ನ ಇಲ್ಲಿನ ಬಕ್ರಾ ಮಂದಿಯಲ್ಲಿ 51 ಲಕ್ಷ ರೂ.ಗೆ ಮಾರಾಟವಾಗಿವೆ.

18 ತಿಂಗಳ ವಯಸ್ಸಿನ ಬಾರ್ಬರಿ ಮೇಕೆ ಸಲ್ಮಾನ್ 65 ಕೆಜಿ ತೂಕ ಮತ್ತು ಬಲ ಕಿವಿಯಲ್ಲಿ ಜನ್ಮ ಗುರುತು ಹೊಂದಿದ್ದರೆ, ರಾಜಸ್ಥಾನಿ ಮೇಕೆ ಘನಿ ಕೂಡ ಇದೇ ರೀತಿಯ ಲಕ್ಷಣಗಳನ್ನು ಹೊಂದಿದೆ.

ಎರಡು ಆಡುಗಳು ಸ್ಥಳೀಯ ರೈತ ಮುಷ್ತಾಕ್ ಅಹ್ಮದ್(45) ಅವರ ಒಡೆತನದಲ್ಲಿದೆ ಮತ್ತು ಈ ವರ್ಷ ಮಾರಾಟವಾದ ಅತ್ಯಂತ ದುಬಾರಿ ಮೇಕೆಗಳಾಗಿವೆ.

ಅರೇಬಿಕ್ ಭಾಷೆಯಲ್ಲಿ ಸಲ್ಮಾನ್ ಎಂದರೆ ವಿನಮ್ರ ಮತ್ತು ನಿಷ್ಠಾವಂತ. ಘನಿ ಎಂದರೆ ಶ್ರೀಮಂತ ಮತ್ತು ಉದಾರ. ಗೋಲ್ಡನ್ ಬಾರ್ಡರ್‌ ಗಳಿಂದ ಅಲಂಕರಿಸಲ್ಪಟ್ಟ ಹಸಿರು ಉಡುಪುಗಳನ್ನು ನಾನು ಮೇಕೆಗಳಿಗೆ ಸಿದ್ಧಗೊಳಿಸಿದ್ದೇನೆ. ನಾನು ಸುಮಾರು ಒಂದು ವರ್ಷದ ಹಿಂದೆ ರಾಜಸ್ಥಾನದಿಂದ ಘನಿ ಖರೀದಿಸಿದೆ. ಸಲ್ಮಾನ್ ಮೇಕೆ ನನ್ನ ಮನೆಯಲ್ಲಿ ಜನಿಸಿದೆ. ಇವುಗಳ ಮೇಲೆ ಧಾರ್ಮಿಕ ಚಿಹ್ನೆಗಳು ಇರುವುದರಿಂದ ಇವು ದುಬಾರಿ. ಅವರ ವಿಶೇಷ ಆಹಾರಕ್ಕಾಗಿ ನಾನು ಸಾಕಷ್ಟು ಹಣವನ್ನು ಖರ್ಚು ಮಾಡಿದ್ದೇನೆ ಎಂದು ಅಹ್ಮದ್ ಹೇಳಿದ್ದಾರೆ.

ಬಕ್ರಾ ಮಂಡಿಯು ಬಾರ್ಬರಿ, ತೋತಾಪರಿ, ಪಂಜಾಬಿ ಬೀಟಲ್, ಕೋಟಾ ಮತ್ತು ವಿದೇಶಿ ತಳಿಗಳಾದ ಆಫ್ರಿಕನ್ ಬೋಯರ್ ಮತ್ತು ಸಾನೆನ್(ಸ್ವಿಟ್ಜರ್ಲೆಂಡ್) ನಂತಹ ವಿವಿಧ ತಳಿಗಳ ಸುಮಾರು ಒಂದು ಲಕ್ಷ ಮೇಕೆಗಳನ್ನು ಮಾರಾಟಕ್ಕೆ ಹೊಂದಿದೆ.

ಹೆಚ್ಚಿನ ಮಾಲೀಕರು ಪಠಾಣ್, ಹೀರಾ, ರಾಜ್‌ಕುಮಾರ್ ಮತ್ತು ಟೈಗರ್‌ನಂತಹ ತಮ್ಮ ಪ್ರಾಣಿಗಳಿಗೆ ಆಸಕ್ತಿದಾಯಕ ಹೆಸರುಗಳನ್ನು ನೀಡಿದ್ದಾರೆ. ಇವುಗಳ ಬೆಲೆ ಸುಮಾರು 10,000 ರೂ.ನಿಂದ ಪ್ರಾರಂಭವಾಗುತ್ತದೆ.

ಡುಂಬಾಸ್(ಟರ್ಕಿ ಮೂಲದ ಕೊಬ್ಬಿನ ಬಾಲದ ಕುರಿ) ಮತ್ತು ಎಮ್ಮೆಗಳು ಸಹ ಮಾರಾಟಕ್ಕೆ ಇವೆ.

ಸುಮಾರು 10 ವರ್ಷಗಳಿಂದ ಮಂಡಿಯನ್ನು ನಿರ್ವಹಿಸುತ್ತಿರುವ ಅಬ್ರಾರ್ ಖಾನ್ ಅವರ ಪ್ರಕಾರ, ಮಾರುಕಟ್ಟೆ ಈ ಬಾರಿ ಆಶಾದಾಯಕವಾಗಿದೆ. ಕಳೆದ ಮೂರು ವರ್ಷಗಳಿಗಿಂತ ಉತ್ತಮ ಮಾರಾಟವನ್ನು ನಾವು ನಿರೀಕ್ಷಿಸುತ್ತಿದ್ದೇವೆ. ಕೇವಲ ವಿಲಕ್ಷಣ ಮಾತ್ರವಲ್ಲದೆ ಭಾರೀ ತೂಕದ ಬಾರ್ಬರಿ ಮೇಕೆಗಳಿಗೂ ಹೆಚ್ಚಿನ ಬೇಡಿಕೆಯಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read