ಬೆಂಗಳೂರು : ರಾಜ್ಯದಲ್ಲಿ ರೇಣುಕಾಸ್ವಾಮಿ ಮಾದರಿಯಲ್ಲಿ ಎರಡು ರಾಕ್ಷಸಿ ಕೃತ್ಯ ನಡೆದಿದ್ದು, ಜನರು ಬೆಚ್ಚಿ ಬಿದ್ದಿದ್ದಾರೆ. ಹೌದು, ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ರೀತಿ ಈ ಪ್ರಕರಣವ ನಡೆದಿದೆ. ಬೆಂಗಳೂರು ಹಾಗೂ ಕಲಬುರಗಿಯಲ್ಲಿ ನಡೆದ 2 ಪ್ರತ್ಯೇಕ ಘಟನೆ ಬೆಚ್ಚಿ ಬೀಳಿಸಿದೆ.
ಪ್ರಕರಣ 1 ಬೆಂಗಳೂರಿನಲ್ಲಿ ಗ್ಯಾಂಗ್ ಅಟ್ಟಹಾಸ
ಮಾಜಿ ಲವರ್ ಗೆ ಅಶ್ಲೀಲ ಸಂದೇಶ ಕಳುಹಿಸಿದ ಆರೋಪದ ಮೇರೆಗೆ ಗ್ಯಾಂಗ್ ಒಂದು ಯುವಕನನ್ನು ಕಿಡ್ನ್ಯಾಪ್ ಮಾಡಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಬೆತ್ತಲೆಗೊಳಿಸಿ ಚಿತ್ರಹಿಂಸೆ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.. ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಯುವಕನನ್ನು ಕಿಡ್ನ್ಯಾಪ್ ಮಾಡಿದ ಗ್ಯಾಂಗ್ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಬಂದು ಬಟ್ಟೆ ಬಿಚ್ಚಿ ವಿಕೃತವಾಗಿ ಹಲ್ಲೆ ನಡೆಸಿದ ಘಟನೆ ಬೆಂಗಳೂರು ಹೊರವಲಯದ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಕುಶಾಲ್ ಎಂಬ ಯುವಕನನ್ನು ಕಿಡ್ನ್ಯಾಪ್ ಮಾಡಿ ಚಿತ್ರಹಿಂಸೆ ನೀಡಲಾಗಿದೆ.ಯುವತಿ ಎದುರೇ ಈ ಘಟನೆ ನಡೆದಿದೆ.
ಘಟನೆ ಹಿನ್ನೆಲೆ
ಕಾಲೇಜಿಗೆ ಹೋಗುತ್ತಿದ್ದಾಗ ಕುಶಾಲ್ ಹಾಗೂ ಯುವಕನ ನಡುವೆ ಪ್ರೀತಿ ಚಿಗುರಿತ್ತು. ಸುಮಾರು 2 ವರ್ಷ ಪ್ರೀತಿ ಯುವತಿ ನಂತರ ಯುವಕನಿಗೆ ಗುಡ್ ಬೈ ಹೇಳಿದ್ದಳು. ನಂತರ ಬೇರೆ ಯುವಕನಿಗೆ ಕಾಳು ಹಾಕಿದ್ದಾಳೆ. ಇದರಿಂದ ರೊಚ್ಚಿಗೆದ್ದ ಕುಶಾಲ್ ಯುವತಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ. ಇದನ್ನು ಯುವತಿ ತನ್ನ ಸ್ನೇಹಿತನಿಗೆ ತಿಳಿಸಿದ್ದಾಳೆ. ನಂತರ ಯುವತಿ ತನ್ನ ಗೆಳೆಯ ಹಾಗೂ ಸ್ನೇಹಿತರ ಜೊತೆ ಆತನನ್ನು ಕಾರಿನಲ್ಲಿ ಅಪಹರಿಸಿಕೊಂಡು ಬರುತ್ತಾರೆ. ನಂತರ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಮಾರಣಾಂತಿಕವಾಗಿ ಹಲ್ಲೆ ನಡೆಸುತ್ತಾರೆ.
ಕುಶಾಲ್ ನ ಬಟ್ಟೆ ಬಿಚ್ಚಿದ ಗ್ಯಾಂಗ್ ಕೋಲುಗಳಿಂದ ಹೊಡೆದು ಹಿಂಸಿಸಿದ್ದಾರೆ. ನಂತರ ಯುವಕನ ಮರ್ಮಾಂಗಕ್ಕೆ ಹೊಡೆದು, ತುಳಿದು ಹಿಂಸೆ ನೀಡಿದ್ದಾರೆ. ಹಲ್ಲೆ ವೇಳೆ ಪುಂಡರು ರೇಣುಕಾಸ್ವಾಮಿ ಕೇಸ್ ಪ್ರಸ್ತಾಪಿಸಿದ್ದಾರೆ. ನೀನು ಅದೇ ತರ ಕೊಲೆಯಾಗ್ತೀಯ ಎಂದು ಹೇಳಿ ಹೆದರಿಸಿದ್ದಾರೆ. ಯುವಕನನ್ನು ಅಟ್ಟಾಡಿಸಿ ಹಲ್ಲೆ ನಡೆಸಿದ್ದಾರೆ. ಓಡಿದರೆ ಕಲ್ಲು ಹೊಡೆಯುತ್ತೀವಿ ಎಂದು ಬೆದರಿಸಿದ್ದಾರೆ.
ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ 17 ವರ್ಷದ ಬಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನ ಬಂಧಿಸಿದ ಬಳಿಕ ಜಾಮೀನು ನೀಡಲಾಗಿದೆ.
ಪ್ರಕರಣ 2 ಕಲಬುರಗಿ : ರೇಣುಕಾಸ್ವಾಮಿ ರೀತಿಯಲ್ಲಿಯೇ ಮತ್ತೊಂದು ಕೊಲೆ ನಡೆದಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ವ್ಯಕ್ತಿಯನ್ನು ಕಿಡ್ನ್ಯಾಪ್ ಮಾಡಿದ್ದ ದುರುಳರು ಆತನನ್ನು ಹತ್ಯೆಗೈದು ನದಿಗೆ ಬಿಸಾಕಿ ಹೋಗಿರುವ ಘಟನೆ ನಡೆದಿದೆ.
ರಾಘವೇಂದ್ರ(39) ಕೊಲೆಯಾಗಿರುವ ವ್ಯಕ್ತಿ. ರಾಘವೇಂದ್ರ ಎಂಬಾತ ಅಶ್ವಿನಿ ಎಂಬ ಮಹಿಳೆಗೆ ಕಿರುಕುಳ ನೀಡುತ್ತಿದ್ದನಂತೆ. ಈ ಬಗ್ಗೆ ಅಶ್ವಿನಿ ತನ್ನ ಗೆಳೆಯ ಗುರುರಾಜ್ ಗೆ ಹೇಳಿದ್ದಳು. ಗುರುರಾಜ್ ಹಾಗೂ ಗ್ಯಾಂಗ್ ರಾಘವೇಂದ್ರನನ್ನು ಕಿಡ್ನ್ಯಾಪ್ ಮಾಡಿ ಹೊತ್ತೊಯ್ದಿದ್ದಾರೆ.
ಹೀಗೆ ಕರೆದೊಯ್ದವರು ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಮನಬಂದಂತೆ ಥಳಿಸಿದ್ದಾರೆ. ಗುರುರಾಜ್, ರಾಘವೇಂದ್ರನ ಕಪಾಳಕ್ಕೆ ಭಾರಿಸುತ್ತಿದ್ದಂತೆ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮೃತದೇಹವನ್ನು ನದಿಗೆ ಎಸೆದು ಆರೋಪಿಗಳು ಪರಾರಿಯಾಗಿದ್ದರು. ಸದ್ಯ ಪ್ರಕರಣ ಸಂಬಂಧ ಗುರುರಾಜ್, ಅಶ್ವಿನಿ ಹಾಗೂ ಗ್ಯಾಂಗ್ ನ್ನು ಕಲಬುರಗಿ ಪೊಲೀಸರು ಬಂಧಿಸಿದ್ದಾರೆ.