BREAKING : ಬೆಂಗಳೂರಲ್ಲಿ ಸಿಲಿಂಡರ್ ಸ್ಪೋಟಗೊಂಡು ಇಬ್ಬರು ಸಾವು, ಮೂವರಿಗೆ ಗಾಯ : ಮನೆ ಛಿದ್ರ ಛಿದ್ರ.!

ಬೆಂಗಳೂರು : ಬೆಂಗಳೂರಲ್ಲಿ ಸಿಲಿಂಡರ್ ಸ್ಪೋಟಗೊಂಡು ಘೋರ ದುರಂತ ಸಂಭವಿಸಿದೆ. ಭೀಕರ ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು, ಮನೆ ಛಿದ್ರ ಛಿದ್ರವಾಗಿದೆ .

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ ಓವರ್ ಟ್ಯಾಂಕ್ ಬಳಿ ಈ ಘಟನೆ ಸಂಭವಿಸಿದೆ. ಮೃತರನ್ನು ನಾಗರಾಜ್ (50) ಶ್ರೀನಿವಾಸ್ (50) ಎಂದು ಗುರುತಿಸಲಾಗಿದೆ. ಮೃತ ನಾಗರಾಜ್ ಪತ್ನಿ ಲಕ್ಷ್ಮಿದೇವಿ ಹಾಗೂ ಅವರ ಮಕ್ಕಳಾದ ಬಸನಗೌಡ ಹಾಗೂ ಅಭಿಷೇಕ್ ಗಾಯಗೊಂಡಿದ್ದಾರೆ.

ಮನೆಯಲ್ಲಿ ದೀಪ ಹಚ್ಚಿದ ಸಂದರ್ಭದಲ್ಲಿ ಮಗ ಅಭಿಷೇಕ್ ಖಾಲಿಯಾಗಿದ್ದ ಸಿಲಿಂಡರ್ ಬದಲಾಯಿಸಲು ಮುಂದಾಗಿದ್ದರು. ಈ ವೇಳೆ ಗ್ಯಾಸ್ ಲೀಕ್ ಆಗಿ ಅವಘಡ ಸಂಭವಿಸಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read