ಡಾಬಾದಲ್ಲಿ ಅವಳಿ ಸಿಲಿಂಡರ್ ಸ್ಫೋಟ: ಐವರ ಸ್ಥಿತಿ ಚಿಂತಾಜನಕ

ಡಾಬಾದಲ್ಲಿ ಅವಳಿ ಸಿಲಿಂಡರ್ ಸ್ಫೋಟಗೊಂಡು ಸಂಭವಿಸಿದ ದುರಂತದಲ್ಲಿ 9 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹರ್ಯಾಣದ ಬಹದ್ದೂರ್ ಗಢದಲ್ಲಿ ನಡೆದಿದೆ.

ಡಾಬಾದಲ್ಲಿ ಎರಡು ಎಲ್ ಪಿಜಿ ಸಿಲಿಂದರ್ ಸ್ಫೋಟಗೊಂಡಿದೆ. 9 ಜನರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಚಿಂತಾಜನಕವಾಗಿದೆ. ಬಹದ್ದೂರ್ ಗಢದ ಮಾಡರ್ನ್ ಇಂಡಸ್ಟ್ರಿಯಲ್ ಏರಿಯಾದ ಮೆಟ್ರೋ ಪಿಲ್ಲರ್ 770ರ ಬಳಿ ಈ ದುರಂತ ಸಂಭವಿಸಿದೆ.

ಗಾಯಾಳುಗಳನ್ನು ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಡಾಬಾದಲ್ಲಿ ಕೆಲಸ ಮಾಡುತ್ತಿದ್ದವರು ಹಾಗೂ ಡಾಬಾ ಪ್ರದೇಶದಲ್ಲಿನ ಸಾರ್ವಜನಿಕರೂ ಕೂಡ ಸೇರಿದ್ದಾರೆ ಎಂದು ತಿಳಿದುಬಂದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read